Header Ads
Breaking News

ಕೊಣಾಜೆ ಕಂಬ್ಲಪದವು ದೈವದ ಕಟ್ಟೆ-ಚಪ್ಪಲಿ ಹಾಕಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳು

ದೈವದ ಕಟ್ಟೆಯ ಬಳಿ ಚಪ್ಪಲಿ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬ್ಲಪದವಿನಲ್ಲಿ ನಡೆದಿದೆ.ಮುಚ್ಚಿರಕಲ್ಲು ಗುಳಿಗ ಸಾನಿಧ್ಯದಲ್ಲಿ ನಿನ್ನೆ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ.
ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು, ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ದುರಹಂಕಾರದಿಂದ ವಿಕೃತಿ ಮೆರೆದಿದ್ದು ಕೆಲವೇ ದಿವಸಗಳಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಆನಂತರ ಎಲ್ಲರಿಂದಲೂ ಕೋಮು ಸಾಮರಸ್ಯದ ಪ್ರತೀಕವಾಗಿ ಗುಳಿಗನ ಆರಾಧನೆ ನಡೆದುಕೊಂಡು ಬಂದಿತ್ತು. ಮುಚ್ಚಿರ ಕಲ್ಲು ಕ್ಷೇತ್ರದ ಸಮಿತಿಯ ಮುಖಂಡರು ಕೊಣಾಜೆ ಪೆÇಲೀಸರಿಗೆ ದೂರು ನೀಡಿದ್ದು, ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಳಿಗಜ್ಜನ ಕಟ್ಟೆಯ ಬಳಿ ಕ್ರಿಕೆಟ್ ಟೂರ್ನಿಮೆಂಟ್ ನಡೆದಿತ್ತು. ನಿನ್ನೆ ಸಂಜೆ ಕಟ್ಟೆಯಲ್ಲಿ ಚಪ್ಪಲಿ ಇಟ್ಟಿದ್ದು ಪತ್ತೆಯಾಗಿದೆ.

Related posts

Leave a Reply

Your email address will not be published. Required fields are marked *