Header Ads
Breaking News

ಕೊಣಾಜೆ ಕೋಡಿಜಾಲ್ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ

ಮಂಗಳೂರಿನ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಡಿಜಾಲ್ ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಷನ್ ಮತ್ತು ಉಳ್ಳಾಲ ಮಾಧ್ಯಮ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಕೊಣಾಜೆ ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹಸಿರುವನ ಕಾರ್ಯಕ್ಕೆ ಚಾಲನೆ ನೀಡಿದರು.

ರಥಬೀದಿ ಕಾಲೇಜಿನ ಪ್ರಾಧ್ಯಾಪಕರಾದ ಡಾ| ನವೀನ್ ಎನ್. ಕೊಣಾಜೆ ಮಾತನಾಡಿ ಕೊಣಾಜೆ ಪರಿಸರದಲ್ಲಿ ಈಗಾಗಲೇ ಎರಡು ವರ್ಷಗಳ ಹಿಂದೆಯೇ ಎನ್‍ಎಸ್‍ಎಸ್ ಮೂಲಕ ಹಸೀರಿಕರಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಮಸೀದ ಪರಿಸರದಲ್ಲಿ 150 ಗಿಡಗಳನ್ನು ನೆಡಲು ಗುಂಡಿ ತೆಗೆದಿದ್ದು ಇದರಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಇನ್ನು ಪರಿಸರವಾದಿ ಮಾದವ ಉಳ್ಳಾಲ್ ಮಾತನಾಡಿ ಇಂದಿನ ದಿನಗಳಲ್ಲಿ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯೊಂದಿಗೆ ಗಿಡ ನೆಟ್ಟು ಅದನ್ನು ಬೆಳೆಸುವ ಕಾರ್ಯ ಆಗಬೇಕೆಂದರು. ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್ ಇದರ ಜಮಾಅತ್ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಷನ್‍ನ ಅಧ್ಯಕ್ಷ ಅಮೀರ್ ಕೋಡಿಜಾಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಕುಮಾರ್ ವಿಟ್ಲ, ಪ್ರಮೋದ್ ಮಂಜೇಶ್ವರ, ತುಷಾರ್ ಆಚಾರ್ಯ ಕೋಟೆಕಾರ್, ಪತ್ರಕರ್ತರಾದ ಮೋಹನ್ ಕುತ್ತಾರ್, ಆರಿಫ್ ಕಲ್ಕಟ್ಟ, ಅಶ್ವಿನ್ ಕುತ್ತಾರ್, ತೇಜೇಶ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜನ ಕೊರೊನಾ ಭೀತಿ ಎದುರಿಸುತ್ತಿದ್ದರೂ ಕಂದಾಯ ಇಲಾಖೆಗೆ ಅದರ ಪರಿಯವೇ ಇಲ್ಲದಂತೆ ವರ್ತಿಸುತ್ತಿದ್ದು, ಪಡುಬಿದ್ರಿ ನ್ಯಾಯಬೆಲೆಯಂಗಡಿ ಸಾಕ್ಷಿಯಾಗಿದೆ. ಪಡುಬಿದ್ರಿ ನ್ಯಾಯಬೆಲೆಯಂಗಡಿಯಲ್ಲಿ ಪಡಿತರ ಪಡೆಯುವುದಕ್ಕಾಗಿ ಜನ ಯಾವುದೇ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಮಂದಿ ಮಾಸ್ಕ್ ಕೂಡಾ ಬಳಸದೆ ಕೊರೊನಾ ಭಯವೇ ಇಲ್ಲದಂತ್ತಿದ್ದರೂ, ನ್ಯಾಯಬೆಲೆ ಪ್ರಮುಖರಾಗಲೀ ಕಂದಾಯ ಅಧಿಕಾರಿಗಳಾಗಲೀ ಅವರಿಗೆ ಮಾಹಿತಿ ನೀಡಲು ಮುಂದಾಗದಿರುವುದು ಸಾರ್ವಜನಿಕವಲಯದಲ್ಲಿ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.

Related posts

Leave a Reply

Your email address will not be published. Required fields are marked *