Header Ads
Breaking News

ಕೊಣಾಜೆ ವಿ.ವಿಯಲ್ಲಿ 40ನೇ ಸಂಸ್ಥಾಪನಾ ದಿನಾಚರಣೆ : ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪರ ಆಹ್ವಾನಕ್ಕೆ ವಿರೋಧ

ಕೊಣಾಜೆ ಮಂಗಳೂರು ವಿ.ವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 40 ನೇ ಸಂಸ್ಥಾಪನಾ ದಿನಾಚರಣೆಗೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕೊಣಾಜೆ ಕಾರ್ಯಕ್ರಮ ನಡೆಯುವ ಮಂಗಳ ಸಭಾಂಗಣದ ಹೊರಗಡೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
2014 ರಿಂದ ಮಂಗಳೂರು ವಿ.ವಿ ಯ ಉಪಕುಲಪತಿಗಳಾಗಿದ್ದ ಪ್ರೊ.ಕೆ ಬೈರಪ್ಪ ಅವರು ಸೋಲಾರ್ ದೀಪ ಹಗರಣ, ವಿದೇಶಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಸಹಿತ ಹಲವು ಹಗರಣಗಳನ್ನು ನಡೆಸಿದ್ದಾರೆಂದು ಎಬಿವಿಪಿ ಆರೋಪಿಸಿತ್ತು. ಈ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದೆ. ತನಿಖೆ ನಡೆಸುವ ವಿಶ್ವಾಸವನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದರು. ಈ ನಡುವೆ ತನಿಖೆ ಸಂದರ್ಭದಲ್ಲೇ ಮತ್ತೆ ವಿಶ್ರಾಂತ ಉಪಕುಲಪತಿ ಪ್ರೊ.ಕೆ ಬೈರಪ್ಪ ಅವರನ್ನು ವಿ.ವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿರುವುದು ಖಂಡನೀಯ . ಇದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಮಂಗಳ ಸಭಾಂಗಣದ ಆವರಣ ಒಳಗೆ ನುಗ್ಗಲು ಪ್ರಯತ್ನಿಸಿದರೂ, ಪೊಲೀಸರು ತಡೆದಿದ್ದಾರೆ.

Related posts

Leave a Reply

Your email address will not be published. Required fields are marked *