Header Ads
Header Ads
Breaking News

ಕೊನೆಗೂ ಗುರುಪುರ ಸೇತುವೆ ದುರಸ್ತಿ : ಮುಂಜಾನೆ 6ರಿಂದ ಸಂಜೆ 6 ವರೆಗೆ ದುರಸ್ತಿಕಾರ್ಯ

ರಾಷ್ಟ್ರೀಯ ಹೆದ್ದಾರಿ 169ಹಾದು ಹೋಗುವ ಗುರುಪುರ ಸೇತುವೆಯ ಗುಂಡಿ ಮುಚ್ಚುವ ಕಾರ್ಯ ಗುರುವಾರ ನಡೆಯುತ್ತಿದ್ದು, ಈ ಕಾರಣದಿಂದ ಸೇತುವೆ ಮೇಲೆ ಒಂದು ದಿನದ ಮಟ್ಟಿಗೆ ವಾಹನ ಸಂಚಾರ ನಿರ್ಭಂಧಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಈ ಬಗ್ಗೆ ಪ್ರಕಟನೆ ಹೊರಡಿಸಿ ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದರು.ಇಂದು ಮುಂಜಾನೆ ಆರರಿಂದ ಸಂಜೆ ಆರರವರೆಗೆ ದುರಸ್ಥಿ ನಡೆಸಲು ಅವಕಾಶ ನೀಡಿಲಾಗಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ದುರಸ್ಥಿ ಕಾರ್ಯ ಆರಂಭವಾಗಿದೆ.ಮೂಡುಬಿದಿರೆಯಿಂದ ಮಂಗಳೂರಿನತ್ತ ಸಾಗುವ ವಾಹನಗಳು ಕೈಕಂಬ-ಬಜಪೆ- ಮರವೂರು ರಸ್ತೆ ಮೂಲಕ ಮತ್ತು ಕೈಕಂಬ- ಪೊಳಲಿ-ಬಿ.ಸಿ. ರೋಡ್ ಮೂಲಕ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಾಗುವ ವಾಹನಗಳು ಮಂಗಳೂರು-ಮರವೂರುಸೇತುವೆ-ಬಜಪೆ-ಕೈಕಂಬವಾಗಿ ಮೂಡುಬಿದಿರೆ ತಲುಪಬೇಕಾಗಿದೆ.

Related posts

Leave a Reply

Your email address will not be published. Required fields are marked *