Breaking News

 ಕೊನೆಯಾಯ್ತು 250 ವರ್ಷಗಳ ಮನಸ್ತಾಪ , ಒಂದಾದ್ರು ಸೋದೆ-ಕುಕ್ಕೆ ಶ್ರೀಗಳು

ಅದು ಒಂದೆರಡು ವರ್ಷಗಳ ಕೊಪ ಅಲ್ಲ ಬರೋಬ್ಬರಿ 250 ವರ್ಷಗಳ ಕೋಪ. ಪೂಜೆಯ ವಿವಾದದಿಂದ ಆರಂಭವಾದ ಕೋಪ ಎರಡು ಮಠದ ಪರಂಪರೆಯಲ್ಲಿ ನಿರಂತರವಾಗಿ 250 ವರ್ಷಗಳ ಕಾಲ ಮುಂದುವರೆದಿತ್ತು .

ಎರಡು ಮಠಗಳ ನಡುವೆ ಇದ್ದ ಕೋಪ ಇದೀಗ ಶಮವಾಗಿದೆ. ಎರಡು ಸ್ವಾಮೀಜಿಗಳು ಒಂದಾಗಿದ್ದಾರೆ. ಹಾಗಾದ್ರೆ ಆ ಮಠಗಳು ಯಾವುದು? ಇವರ ನಡುವೆ ಇದ್ದ ವೈಮನಸ್ಸದ್ರೂ ಏನು? ಇಲ್ಲಿದೆ ಡೀಟೇಲ್ಸ್
ಮನುಷ್ಯನಿಗೆ ಕೋಪಬರೋದು ಸಮಾನ್ಯ, ಮನಸ್ತಾಪವಾಗಿ ಪರಸ್ಪರ ಮಾತನಾಡೋದನ್ನು ನಿಲ್ಲಿಸಬಹುದು. ಆದ್ರೆ ಅರಿಷ್ಡವರ್ಗಗಳನ್ನು ದಾಟಿ ಬಂದ ಇಬ್ಬರು ಸ್ವಾಮಿಗಳ ವೈಮನಸ್ಸು 250ವರ್ಷಗಳ ಬಳಿಕ ಶಮನವಾಗಿದೆ. ಅದು ಕೂಡ ಉಡುಪಿಯ ಕೃಷ್ಣನ ಸನ್ನಿದಿಯಲ್ಲಿ. ಹೌದು ಉಡುಪಿಯ ಸೋದೆ ಶ್ರೀ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಶ್ರೀಗಳ ನಡುವಿನ ವೈಮನಸ್ಸು ಇದೀಗ ಶಮನವಾಗಿದ್ದು ಪೂಜೆಯ ವಿವಾದ ಸುಖಾಂತ್ಯವಾಗಿದೆ. ಕುಕ್ಕೆ ಸುಭ್ರಹ್ಮಣ್ಯ ದೇವಸ್ಥಾನ ದಕ್ಷಿಣ ಭಾರದಲ್ಲೇ ಅತೀ ಪ್ರಸಿದ್ದ ಧಾರ್ಮಿಕ ಕೇಂದ್ರ . ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ವಿದ್ಯಾ ಪ್ರಸನ್ನ ಶ್ರೀಗಳು ಸದ್ಯದ ಪೀಠಾಧಿಪತಿಗಳು. ಇನ್ನು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಒಳಪಡುವ ೮ ಮಠಗಳಿವೆ. 8 ಮಠಗಳ ಪೈಕಿ 800 ವರ್ಷಗಳ ಇತಿಹಾಸದಲ್ಲಿ ಸೋದೆ ಮಠದ ಸ್ವಾಮೀಜಿಗಳು ಹಿರಿಯ ಸ್ವಾಮೀಜಿಗಳಾಗಿದ್ದಾರೆ. ಸದ್ಯ ಸೋದೆ ಮಠಕ್ಕೆ ವಿಶ್ವವಲ್ಲಭ ತೀರ್ಥರು ಪೀಠಾಧಿಪತಿಗಳಾಗಿದ್ದಾರೆ.ಎರಡೂ ಮಠಗಳು ಆರ್ಥಿಕವಾಗಿ-ಧಾರ್ಮಿಕವಾಗಿ ಬಲಿಷ್ಟವಾಗಿ ಬೆಳೆದಿದೆ. ಆದ್ರೆ 250ವರ್ಷಗಳ ಹಿಂದಿನ ವೈಮನಸ್ಸಿನ ಕಾರಣ ಎರಡೂ ಮಠಗಳ ಸ್ವಾಮೀಜಿಗಳು ಪರಸ್ಪರ ಎದುರುರಾಗಿರಲಿಲ್ಲ.
ಅಂದ ಹಾಗೆ ಇದು 250ವರ್ಷಗಳ ಹಿಂದಿನ ಕಥೆ. ಉಡುಪಿಯ ಉಂಡಾರು ಗ್ರಾಮದ ಸೋದರರು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿ ತೀರ್ಥರು ದೀಕ್ಷೆ ಪಡೆದು ಪೀಠಾಧಿಪತಿಗಳಾದ್ರೆ, ಇವರ ಸಹೋದರ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯಿತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದ ಕಾರಣ ಪೂಜೆಯ ಘಳಿಗೆಯಲ್ಲಿ ಸೋದೆ ಶ್ರೀಗಳು ತಲುಪಲಾಗಲಿಲ್ಲ. ಕೋಪಗೊಂಡ ಕುಕ್ಕೆ ಶ್ರೀಗಳು ಕಾಯದೇ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆ ಶ್ರೀಗಳು ಇದನ್ನು ಅವಮಾನ ಎಂದುಕೊಂಡು ಮತ್ತೆ ಯಾವತ್ತೂ ಬರೋದಿಲ್ಲ, ಮಾತನಾಡೊದಿಲ್ಲ ಎಂದು ಹೇಳಿ ವಾಪಾಸಾದರು. ಅಲ್ಲಿಂದ ಇಲ್ಲಿಯ ತನಕ ಎರಡೂ ಮಠದ ಶ್ರೀಗಳು ಪರಸ್ಪರ ಮಾತನಾಡೋದಾಗಲೀ, ಎದುರುಗೊಲ್ಲೋದಾಗಲೀ ಆಗಿಲ್ಲ. ಸೋದೆ ಪರಂಪರೆಯ ಶ್ರೀಗಳು ಕುಕ್ಕೆಯ ಕುಮಾರಾಧಾರ ನದಿಯನ್ನು ದಾಟಿಲ್ಲ.. ಇನ್ನು ಕುಕ್ಕೆಯ ಪರಂಪರೆಯ ಶ್ರೀಗಳು ಉಡುಪಿ ಫಲ್ಗುಣಿ ನದಿಯನ್ನು ದಾಟಿಲ್ಲ.. ಆದ್ರೆ ಈ ವೈಮನಸ್ಸು ಇಂದಿಗೆ ಕೊನೆಯಾಗಿದೆ.
ಇಬ್ಬರು ಯತಿಗಳ ಸಮಾಗಮಕ್ಕೆ ವೇದಿಕೆಯನ್ನು ಕಲ್ಪಿಸಿದ್ದು ಪೇಜಾವರ ಶ್ರೀಗಳು. ಸ್ವಾಮೀಜಿ, ಮಠಗಳ ನಡುವೆ ವೈಮನಸ್ಸು ಇರಬಾರದು ಎಂಬ ಕಾರಣಕ್ಕೆ ಎರಡೂ ಸ್ವಾಮೀಜಿಗಳನ್ನು ಒಂದು ಮಾಡೋ ಕಾರ್ಯಕ್ಕೆ ಮುಂದಾದ ಪೇಜಾವರ ಶ್ರೀಗಳು ಈ ಕಾರ್ಯದಲ್ಲಿ ಸಫಲ ಕೂಡಾ ಆದ್ರು. ಅದಕ್ಕೆ ದಿನ ಕೂಡಾ ಕೂಡಿ ಬಂತು. ಇಂದು ಕುಕ್ಕೆ ಶ್ರೀಗಳನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಮೊದಲು ಅನಂತೇಶ್ವರನ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವರಲ್ಲಿ ಕ್ಷಮಾಪನೆಯನ್ನು ಕೇಳಿ ಯತಿದ್ವಯರು ಹಿಂದಿನ ವೈಮನಸ್ಸಿಗೆ ಎಳ್ಳು ನೀರು ಬಿಟ್ಟರು. ಚಂದ್ರಮೌಳೀಶ್ವರ ಹಾಗೂ ಕೃಷ್ಣನ ಸನ್ನಿದಿಯಲ್ಲೂ ಕ್ಷಮಾಪನೆಯನ್ನು ಕೇಳಿ ಇನ್ನು ಸಹೋದರ ಮಠದಂತೆ ನಾವಿರುತ್ತೇವೆ ಎಂದು ಪ್ರಮಾಣ ಮಾಡಿದರು. ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಸೇರಿದಂತೆ ಅನೇಕ ಯತಿಗಳು ಹಾಗೂ ಭಕ್ತರು ಈ ಒಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಒಟ್ಟಿನಲ್ಲಿ 250ವರ್ಷಗಳ ವೈಮನಸ್ಸು ಕೃಷ್ಣನ ಸನ್ನಿದಿಯಲ್ಲಿ ಶಮನವಾಗಿದೆ. ನಾಳೆ ಸೋದೆ ಮಠಕ್ಕೆ ಕುಕ್ಕೆ ಶ್ರೀಗಳು ಪ್ರವೇಶ ಮಾಡಲಿದ್ದಾರೆ. ಮೇ.31ರಂದು ಸೋದೆ ಶ್ರೀಗಳು ಕುಮಾರಾಧಾರ ನದಿಯನ್ನು ದಾಟಿ ಕುಕ್ಕೆ ಸುಭ್ರಹ್ಮಣ್ಯ ಮಠಕ್ಕೆ ಹೋಗಲಿದ್ದಾರೆ. ಒಟ್ತಾರೆಯಾಗಿ ಎರಡೂ ಮಠಗಳ ನಡುವಿನ ಬಾಂಧವ್ಯ 250ವರ್ಷಗಳ ನಂತ್ರ ಏರ್ಪಟ್ಟಿದೆ.

Related posts

Leave a Reply