Header Ads
Header Ads
Breaking News

ಕೊಪಾ ಫುಟ್‌ಬಾಲ್ ಚಾಂಪಿಯನ್‌ಶಿಪ್, ಬಾರ್ಸಿಲೋನಾಗೆ ದಾಖಲೆಯ 29ನೇ ಪ್ರಶಸ್ತಿ

ಲಯೊನೆಲ್ ಮೆಸ್ಸಿ, ನೇಮರ್ ಮತ್ತು ಪಾಕೊ ಅಲಕೇಸರ್ ಅವರ ಮಿಂಚಿನ ಆಟದ ಬಲದಿಂದ ಎಫ್ಸಿ ಬಾರ್ಸಿಲೋನಾ ತಂಡ ಕೊಪಾ ಡೆಲ್ ರೇ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ೨೯ನೇ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು.
ಫೈನಲ್ನಲ್ಲಿ ಬಾರ್ಸಿಲೋನಾ ತಂಡ ೩-೧ ಗೋಲುಗಳಿಂದ ಅಲವೇಸ್ ತಂಡವನ್ನು ಮಣಿಸಿತು. ೯೬ ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಅಲವೇಸ್ ತಂಡ ಶುರುವಿನಿಂದಲೇ ಮಿಡ್ಫೀಲ್ಡ್ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿತು. ಹೀಗಾಗಿ ಬಲಿಷ್ಠ ಬಾರ್ಸಿಲೋನಾ ತಂಡಕ್ಕೆ ಮೊದಲ ೨೯ ನಿಮಿಷಗಳಲ್ಲಿ ಗೋಲು ಗಳಿಸಲು ಆಗಲಿಲ್ಲ.
೩೦ನೇ ನಿಮಿಷದಲ್ಲಿ ಮೆಸ್ಸಿ ಮೋಡಿ ಮಾಡಿದರು. ಸಹ ಆಟಗಾರ ನೇಮರ್ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ತಡೆದ ಅವರು ಅದನ್ನು ೧೮ ಗಜ ದೂರದಿಂದ ಒದ್ದು ಎದುರಾಳಿ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. ಈ ಮೂಲಕ ಅರ್ಜೆಂಟೀನಾದ ಆಟಗಾರ ಈ ಋತುವಿನಲ್ಲಿ ೫೪ ಗೋಲು ಗಳಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

Related posts

Leave a Reply