Header Ads
Header Ads
Breaking News

ಕೊಬ್ಬು ಇಳಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ: ಬಿ.ರಮನಾಥ ರೈ ಹೇಳಿಕೆ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲು ವಿಮಾನದಲ್ಲಿ ತಿರುಗಾಡುತ್ತಾರೆ, ದೆಹಲಿಯಲ್ಲಿ ವಾಸ್ತವ್ಯ ಮಾಡುತ್ತಾರೆ. ಅವರಿಗೆ ಬಡಜನರ ಕಷ್ಟ ಗೊತ್ತಿಲ್ಲ. ಪಾದಯಾತ್ರೆ ಮಾಡುವ ನಮಗೆ ಕೊಬ್ಬು ಬಂದಿದೆ ಎಂದು ಅಪಹಾಸ್ಯ ಮಾಡುತ್ತಾರೆ. ಕೊಬ್ಬು ಬಂದಿರುವ ಸಂಸದನ ಕೊಬ್ಬು ಇಳಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದು ಮಾಜಿ ಸಚಿವ ಬಿ.ರಮನಾಥ ರೈ ಗುಡುಗಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ – ಬಿ.ಸಿ.ರೋಡು ಕಾಮಗಾರಿ ಸ್ಥಗಿತ ವಿರೋಧಿಸಿ ಕಾಂಗ್ರೆಸ್ ಕೈಗೊಂಡ ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ಉಳಿಸಿ ಹೋರಾಟದ ಕಾಲ್ನಡಿಗೆ ಜಾಥದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಗಳೂರು ವಿಮಾನ ನಿಲ್ದಾಣ, ಬಂದರು, ಎನ್‌ಐಟಿಕೆ, ಎಂಆರ್‌ಪಿಎಲ್, ಎಂಸಿಎಫ್ ಇವೆಲ್ಲವೂ ಕಾಂಗ್ರೆಸ್‌ನ ಕೊಡುಗೆ ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಇಲ್ಲಿನ ಸಂಸದರಾದವರು ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯವನ್ನು ಕೊಟ್ಟ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಆದರೆ ಅವರ ಬಗ್ಗೆ ಲಘುವಾಗಿ ಮಾತನಾಡುವ ಬಿಜೆಪಿಗರ ಮನೋಸ್ಥಿತಿ ಹೇಗಿರಬಹುದು ಎಂದು ಪ್ರಶ್ನೆ ಮಾಡಿದ ಅವರು ಬಿಜೆಪಿ ಮನುಷ್ಯತ್ವ ಇಲ್ಲದ ಪಕ್ಷ ಎಂದು ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ನಾಶವಾಗಿ ಫ್ಯಾಸಿಸ್ಟ್ ಆಡಳಿತ ಬರುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದುಡಿದರೆ ಮಾತ್ರ ಚುನಾವಣೆ ಗೆಲ್ಲುತ್ತೇವೆ. ಪ್ರತಿಯೊಂದು ಬೂತಿನಲ್ಲಿ ನೂರು ಯುವಕರನ್ನು ಸಂಘಟಿಸಿ ಅವರೆಲ್ಲ ಎದೆತಟ್ಟಿ ಕಾಂಗ್ರೆಸ್ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದರು. ಬಿಬಿಎಂಪಿಯ ನಾಲ್ಕು ಕಾರ್ಪೊರೇಟರ್ ತರಿಸಲು ಸಾಧ್ಯವಾಗದ ಬಿಜೆಪಿಗರಿಗೆ 15 ಮಂದಿ ಶಾಸಕರನ್ನು ತರಿಸಲು ಸಾಧ್ಯವೇ? ಅವರು ಟೆಸ್ಟ್ ಮ್ಯಾಚ್ ಆಡಲಿ, ನಾವು ಒನ್ ಡೇ ಮ್ಯಾಚ್ ಆಡಿ ಮುಗಿಸುತ್ತೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಕೆಪಿಸಿಸಿಯ ಯು.ಬಿ.ವೆಂಕಟೇಶ್ ಮಾತನಾಡಿ ರಾಜ್ಯದ ಸಮ್ಮಿಶ್ರ ಸರಕಾರ ಸದೃಢವಾಗಿದೆ. ಐದು ಜನ ಪಾರ್ಟಿ ಬಿಟ್ಟರೆ ಬಿಜೆಪಿ ಹತ್ತು ಮಂದಿ ಕಾಂಗ್ರೆಸ್ ಸೇರುತ್ತಾರೆ ಎಂದರು. ಡಿಸಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಸದಸ್ಯ ಅಮೃತ ಶೆಣೈ, ಮಾಜಿ ಶಾಸಕರಾದ ಶಕುಂತಳ ಶೆಟ್ಟಿ ಅಭಯಚಂದ್ರ ಜೈನ್, ಮೊದೀನ್ ಬಾವಾ ಪಕ್ಷ ಮುಖಂಡರಾದ ಸವಿತಾ ರಮೇಶ್, ಮಿಥುನ್ ರೈ, ಕೋಡಿಚಾಲ್ ಇಬ್ರಾಹಿಂ, ಮಿಥುನ್ ರೈ, ಬಿ.ಎಚ್.ಖಾದರ್, ಧನಂಜಯ ಅಡ್ಪಂಗಾಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ ಮತತಿತರರು ಹಾಜರಿದ್ದರು.

Related posts

Leave a Reply