Header Ads
Header Ads
Header Ads
Breaking News

ಕೊರಗಜ್ಜನಿಗೆ ಫೇಸ್‌ಬುಕ್‌ನಲ್ಲಿ ಅವಹೇಳನ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ಒತ್ತಾಯ

ಇತ್ತೀಚಿನ ದಿನಗಳಲ್ಲಿ ಕೊರಗ ಜನಾಂಗದ ಮೇಲೆ ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನ ಮಾಡುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಂದರ ಅವರು, ಕೊರಗ ಸಮುದಾಯವು ಕರಾವಳಿ ಕರ್ನಾಟಕದ ಜನಾಂಗವಾಗಿದ್ದು, ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದ ಕುಲದೈವ, ಸಾಂಸ್ಕೃತಿ ಪುರುಷನಾಗಿ ಆರಾಧಿಸಲ್ಪಡುವ ಕೊರಗಜ್ಜನನ್ನು ಸಾಮಾಜಿಕ ಜಾಲಾತಾಣವಾದ ಫೆಸ್‌ಬುಕ್ ನಲ್ಲಿ ತೀರಾ ಮಟ್ಟದಲ್ಲಿ ಅಸಭ್ಯ ಭಾಷೆಯಲ್ಲಿ ಸಂಬೋದಿಸಿ, ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದು, ಇದು ಇಡೀ ಸಮುದಾಯದ ಜನತೆಗೆ ನೋವುಂಟು ಮಾಡಿದೆ ಎಂದು ಹೇಳಿದರು.

ವರದಿ: ಶರತ್

Related posts

Leave a Reply