Header Ads
Header Ads
Header Ads
Breaking News

ಕೊರಗ ಸಮುದಾಯದ ಯುವತಿಗೆ ಅನ್ಯಾಯ ಬೆಳುವಾಯಿ ಪಂಚಾಯತ್ ವಿರುದ್ಧ ಪ್ರತಿಭಟನೆ

ಮೂಡುಬಿದಿರೆ: ಕೊರಗ ಸಮುದಾಯದ ಯುವತಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆಂದು ಆರೋಪಿಸಿ ಬೆಳುವಾಯಿ ಗ್ರಾಮ ಪಂಚಾಯತ್ ವಿರುದ್ಧ ಮೂಡುಬಿದಿರೆ ಕೊರಗರ ಅಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಕೊರಗ ಸುದಾಯದ ಮುಖಂಡ ಬಾಬು ಪಾಂಗಾಳ ಪ್ರತಿಭಟನೆಯನ್ನುದ್ದೇಶಿ ಮಾತನಾಡಿ ಕೊರಗ ಸಮುದಾಯದ ಮಹಿಳೆ ಸುನೀತಾರನ್ನು ಅಟೆಂಡರ್ ಹುದ್ದೆಗೆ ನೇಮಿಸಿಕೊಂಡ ಪಂಚಾಯತ್ ಅವರನ್ನು ಒಂದೂವರೆ ತಿಂಗಳು ಸಂಬಳ ಕೊಡದೆ ದುಡಿಸಿ ನಂತರ ನೇಮಕಾತಿಗೆ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ಸಿಕ್ಕಿಲ್ಲ ಎಂಬ ಸಬೂಬು ನೀಡಿ ಕೆಲಸದಿಂದ ವಜಾಗೊಳಿಸಲಾಗಿದೆ. ಇದು ಅನ್ಯಾಯ. ಒಂದೂವರೆ ತಿಂಗಳ ದುಡಿಮೆಗೆ ಸಂಬಳ ಕೊಡಬೇಕು, ಸಂಬಳ ಕೊಡದೆ ದುಡಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಕಾನೂನು ಕ್ರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

15 ದಿನಗಳ ಕಾಲಾವಕಾಶ ಕೇಳಿದ ಅಧ್ಯಕ್ಷರು : ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದ ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್‍ಯ ಪಂಚಾಯತ್‌ನ ಅಟೆಂಟರ್ ಹುದ್ದೆಯಲ್ಲಿ ಕಾರ್‍ಯನಿರ್ವಹಿಸುತ್ತಿದ್ದ ಉದ್ಯೋಗಿಗೆ ಬಡ್ತಿಗೆ ಅಗತ್ಯವಿರುವಷ್ಟು ಸೇವಾ ಅವಧಿ ಪೂರ್ಣಗೊಳ್ಳದ ಕಾರಣ ಆತನಿಗೆ ಬಡ್ತಿ ನೀಡಲು ಜಿಲ್ಲಾ ಪಂಚಾಯತ್ ನಿರಾಕರಿಸಿದರಿಂದ ಈ ಹುದ್ದೆ ತೆರವುಗೊಳ್ಳಲಿಲ್ಲ. ಆದ್ದರಿಂದ ಕಾನೂನಿನ ತೊಡಕಿನಿಂದಾಗಿ ಸುನೀತಾರನ್ನು ಅಟೆಂಡರ್ ಹುದ್ದೆಗೆ ನೇಮಕಗೊಳಿಸಲು ಸಾಧ್ಯವಾಗಲಿಲ್ಲ. ಅವರು ಒಂದೂವರೆ ತಿಂಗಳು ಪಂಚಾಯತ್‌ನಲ್ಲಿ ಕೆಲಸ ಮಾಡಿದಕ್ಕೆ ಗೌರವ ಸಂಭಾವನೆ ನೀಡುವ ಬಗ್ಗೆ ಶೀಘ್ರದಲ್ಲೆ ಪಂಚಾಯತ್‌ನ ವಿಶೇಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ಇದಕ್ಕೆ ನನಗೆ ಹದಿಕೈದು ದಿನಗಳ ಕಾಲಾವಕಾಶ ನೀಡಬೇಕು. ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಿಂದ ಲೋಪ ಆಗಿದ್ದಲ್ಲಿ ಜಿಲ್ಲಾ ಪಂಚಾಯತ್ ನೇಮಿಸಿದ ತನಿಖಾ ತಂಡ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಸಿ‌ಇ‌ಒ ಆಗಮನಕ್ಕೆ ಆಗ್ರಹ: ಇದೇ ವೇಳೆ ಜಿಲ್ಲಾ ಪಂಚಾಯತ್ ಸಿ‌ಇ‌ಒ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಅವರು ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದ ಅವರು ಬೇಡಿಕೆಗೆ ಸ್ಪಂದಿಸದಿದ್ದರೆ ಆಹೋರಾತ್ರಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.

ಕೊರಗ ಸಮುದಾಯದ ಮುಖಂಡರಾದ ಸಂಜೀವ, ಗೌತಮ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಗೋಪಾಲ, ಸದಸ್ಯರಾದ ಶಶಿಕಲಾ ಮತ್ತಿತರರು ಭಾಗವಹಿಸಿದರು.

ವರದಿ: ಪ್ರೆಮಾಶ್ರೀ ಮೂಡಬಿದರೆ

Related posts

Leave a Reply