Header Ads
Breaking News

ಕೊರೊನಾ ಭೀತಿ, ಕರ್ನಾಟಕ ಲಾಕ್‍ಡೌನ್ ವಿಚಾರ : ಪುತ್ತೂರು ನಗರ ಸಂಪೂರ್ಣ ಬಂದ್

ಕೊರೊನಾ ರೋಗ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯ ಇಂದಿನಿಂದ ಲಾಕ್ ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳನ್ನು ತೆರೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಕಾರಣಕ್ಕಾಗಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಜನ ಸಂಚಾರ ವಿರಳವಾಗಿದೆ. ಪುತ್ತೂರು ನಗರ ಸಂಪೂರ್ಣ ಬಂದ್ ಆಗಿದ್ದು, ಜನರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಲು,ತರಕಾರಿ,ಮೆಡಿಕಲ್, ಹಣ್ಣುಹಂಪಲುಗಳ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿವೆ. ಅಟೋ,ಬಸ್ ಸೇವೆಗಳೂ ಸ್ಥಗಿತಗೊಂಡಿದ್ದು, ಜನ ರಸ್ತೆಗಿಳಿಯಲು ನಿರಾಸಕ್ತಿ ತೋರುತ್ತಿದ್ದಾರೆ.

Related posts

Leave a Reply

Your email address will not be published. Required fields are marked *