Header Ads
Breaking News

ಕೊರೊನಾ ವೈರಸ್ ಅಲರ್ಟ್ ಹಿನ್ನೆಲೆ : ಪುತ್ತೂರಿನಲ್ಲಿ ಕೊರೊನಾ ಕುರಿತು ಜಾಗೃತಿ ಕರಪತ್ರ

ಕೊರೊನಾ ಅಲರ್ಟ್ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಲಾಕ್ ಔಟ್ ಮಾಡುವಂತೆ ಸರಕಾರ ಸೂಚನೆ ನೀಡಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಖಾಸಗಿ,ಹಾಗೂ ಸರಕಾರಿ ಬಸ್ ಸೇವೆಗಳು ಮುಂಜಾನೆಯಿಂದಲೇ ಬಂದ್ ಆಗಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದರೂ ಪುತ್ತೂರಿನ ಹಲವು ಕಡೆಗಳಲ್ಲಿ ಎಲ್ಲಾ ಅಂಗಡಿ-ಮುಂಗಟ್ಟುಗಳು ತೆರೆಯಲಾರಂಭಿಸಿದ್ದು, ಜನರೂ ಅಧಿಕ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ಜನರ ನಿಯಂತ್ರಣಕ್ಕೆ ಮುಂದಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ. ಪೊಲೀಸ್  ಇಲಾಖೆಯ ಮೂಲಕ ಈ ಕಾರ್ಯಾಚರಣೆ ಆರಂಭಗೊಂಡಿದೆ. ಎಲ್ಲಾ ಸರಕಾರಿ ಇಲಾಖೆಯ ಅಧಿಕಾರಿಗಳು ಬೀದಿಗೆ ಬಂದು ಜನರಲ್ಲಿ ಕೊರೊನಾ ಕುರಿತು ಮಾಹಿತಿ ನೀಡುವ ಕರಪತ್ರವನ್ನೂ ಹಂಚಲಾರಂಭಿಸಿದ್ದಾರೆ.

Related posts

Leave a Reply

Your email address will not be published. Required fields are marked *