Header Ads
Breaking News

ಕೊರೊನಾ ವೈರಸ್ ಭೀಕರತೆ ಹೆಚ್ಚಳ ಹಿನ್ನೆಲೆ : ಮೀನು ವ್ಯಾಪಾರಿಗಳ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಕೊರೊನ ವೈರಸ್‍ನ ಭೀಕರತೆ ಹೆಚ್ಚಳದ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಕಳ ತಾಲೂಕಿನಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

144(3) ಸೆಕ್ಷನ್ ಜಾರಿಯಲ್ಲಿರುವ ಕಾರಣ ಕಾರ್ಕಳ ನಗರದಲ್ಲಿ ಜನಸಂದಣಿಯ ಕಡಿಮೆಯಿದ್ದು. ನಿನ್ನೆ ಶುಕ್ರವಾರ 250 ಖಾಸಗಿ ಬಸ್ಸುಗಳಲ್ಲಿ ಕೇವಲ 70 ಬಸ್‍ಗಳು ಮಾತ್ರ ಓಡಾಟ ನಡೆಸಿತ್ತು. ಕಾರ್ಕಳದಿಂದ ಕೊಟ್ಟಿಗೆಹಾರ ಹೋಗುವ ಬಸ್ಸಿನಲ್ಲಿ ಕೇವಲ ಮೂರು ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಾರ್ಕಳ ನಗರದಲ್ಲಿ ನಡೆಯುವ ಶನಿವಾರದ ವಾರದ ಸಂತೆ ಇರುವುದಿಲ್ಲ ಎಂದು ಪುರಸಭೆ ಅಧಿಕಾರಿಗೆ ರೇಖಾ ಎಂದು ಪುರಸಭೆ ಅಧಿಕಾರಿಗೆ ರೇಖಾ ಶೆಟ್ಟಿ ಮುಂಚಿತವಾಗಿಯೇ ತಿಳಿಸಿದ್ದರು. ಆದರೆ ಇಂದು ಮಾರುಕಟ್ಟೆಯಲ್ಲಿ ಮಾರಾಟಗಾರರು ಬೆಳಿಗ್ಗೆ ಹೊತ್ತಿಗೆ ಮೀನು ವ್ಯಾಪಾರ ಪ್ರಾರಂಭಿಸಿದ್ದರು. ಇದನ್ನು ತಿಳಿದ ಪುರಸಭಾ ಸಿಬ್ಬಂದಿಗಳು ಹಾಗೂ ಪೆÇಲೀಸರು ಮುಖ್ಯ ಮಾರುಕಟ್ಟೆಯ ಮುಖ್ಯ ಎರಡು ಗೇಟುಗಳನ್ನು ಮುಚ್ಚಿ ಬೀಗ ಜಡಿದಾಗ ಮೀನು ಮಾರಾಟದ ಮಹಿಳೆಯರ ಮತ್ತು ಪುರಸಭೆ ಅಧಿಕಾರಿಯ ನಡುವೆ ಮಾತಿನ ಚಕಮಕಿ ನಡೆಯಿತು. ನಮಗೆ ವಾರದ ಸಂತೆ ರದ್ದುಮಾಡಿದ ವಿಷಯ ತಿಳಿದಿಲ್ಲ ಈಗ ನಾವು ತಂದ ಸಾವಿರಾರು ರೂಪಾಯಿ ಈ ಮೀನನ್ನು ಏನು ಮಾಡಬೇಕು ಎಂದು ಅಧಿಕಾರಿ ಅವರ ಬಳಿ ಕೇಳಿದಾಗ ಪುರಸಭೆ ಅಧಿಕಾರಿ ಮೃದು ಧೋರಣೆ ತಾಳಿ ತಂದ ಮೀನನ್ನು ಆದಷ್ಟು ಬೇಗ ಮಾರಾಟ ಮಾಡಿ ಮಾರುಕಟ್ಟೆಯನ್ನು ಖಾಲಿ ಮಾಡಿ ಕೊರೊನಾ ರೋಗ ಹರಡದಂತೆ ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭಾ ಸಿಬ್ಬಂದಿಗಳು ಹಾಗೂ ಕಾರ್ಕಳ ನಗರ ಠಾಣಾ ಪೆÇಲೀಸ್ ಸಿಬ್ಬಂದಿಗಳು ಹಾಜರಿದ್ದರು.

Related posts

Leave a Reply

Your email address will not be published. Required fields are marked *