Header Ads
Breaking News

ಕೊರೊನಾ ವೈರಸ್ ಹಿನ್ನೆಲೆ ದೇಶದೆಲ್ಲೆಡೆ ಆತಂಕ : ಅಂತರ ಕಾಯ್ದುಕೊಂಡ ಪುತ್ತೂರಿನ ಜನತೆ

ಕೊರೊನಾ ಹಿನ್ನಲೆಯಲ್ಲಿ ನಿನ್ನೆಯಿಂದ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಮಹಾಮಾರಿಯನ್ನು ತಡೆಗಟ್ಟಲು ಇರುವ ಒಂದೇ ಅವಕಾಶ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಎನ್ನುವ ಸೂಚನೆಯನ್ನೂ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು. ಇದೀಗ ಈ ಸೂಚನೆಯನ್ನು ಸಾರ್ವಜನಿಕರು ಪಾಲಿಸಲು ಆರಂಭಿಸಿದ್ದು, ಪುತ್ತೂರಿನ ಹಲವು ಕಡೆಗಳಲ್ಲಿ ಈ ಸಾಮಾಜಿಕ ಅಂತರ ಕಾಯ್ದುಕೊಂಡ ದೃಶ್ಯಗಳು ಇಂದು ಕಂಡು ಬಂದಿದೆ. ಅವಶ್ಯಕ ವಸ್ತುಗಳಿಗಾಗಿ ಜನ ಅಂಗಡಿಗಳ ಮುಂದೆ ಮುಗಿಬೀಳದೆ ಪರಸ್ಪರ ಒಂದು ಮೀಟರ್ ಅಂತರದಲ್ಲಿ ಸಾಲಾಗಿ ನಿಲ್ಲುವ ಮೂಲಕ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ. ಇಂದು ಸಹ ಅಗತ್ಯ ವಸ್ತುಗಳ ಅಂಗಡಿಗಳಾದ ದಿನಸಿ, ತರಕಾರಿ,ಹಣ್ಣು-ಹಂಪಲು,ಮಾಂಸ,ಕೋಳಿ ಅಂಗಡಿಗಳ ಮುಂದೆ ಜನರ ಸಾಲು ಕಂಡು ಬಂದಿದೆ. ಪೊಲೀಸ್ ರು ಸಾರ್ವಜನಿಕರನ್ನು ನಿಯಂತ್ರಿಸುವ ಕಾರ್ಯದಲ್ಲೂ ನಿರತರಾಗಿದ್ದು, ಅನಗತ್ಯವಾಗಿ ತಿರುಗುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

Related posts

Leave a Reply

Your email address will not be published. Required fields are marked *