Header Ads
Breaking News

ಕೊರೋನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ : ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ

 ಮಗಳ ಮದುವೆಯ ಓಡಾಟದಲ್ಲಿರುವ ಸಚಿವ ಶ್ರೀರಾಮಲು ಉಡುಪಿ ಕೃಷ್ಣ ಮಠಕ್ಕೆ ಭೇಟಿ ಅಮಂತ್ರಣ ಪತ್ರಿಕೆಯೊಂದಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಮಠದ ವತಿಯಿಂದ ರಾಜಾಂಗಣದಲ್ಲಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಲು ನಾನು ಮಗಳ ಮದುವೆಯ ಸಿದ್ಧತೆಯಲ್ಲಿದ್ದೇನೆ. ಹೀಗಾಗಿ ಎಲ್ಲಾ ಜಿಲ್ಲೆಗಳಿಗೆ ಓಡಾಡಿ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತಿದ್ದೇನೆ. ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಇರುವುದು ಹೌದು. ಆದರೆ ಯಡಿಯೂರಪ್ಪನವರ ಸ್ಥಿತಿಯನ್ನು ನಾವು ಅರಿತುಕೊಳ್ಳಬೇಕಿದೆ. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಪಕ್ಷ ನನ್ನನ್ನು ಗುರುತಿಸುತ್ತೆ ಎಂಬ ನಂಬಿಕೆ ಇದೆ. ಯಡಿಯೂರಪ್ಪನವರು ನಮ್ಮ ನಾಯಕರು ಅವರ ಮೇಲೆ ನಮಗೆ ವಿಶ್ವಾಸವಿದೆ. ಉಗ್ರಪ್ಪ ಅವರ ಅಧಿಕಾರ ಕಳೆದು ಹೋದ ಮೇಲೆ ಹತಾಶರಾಗಿದ್ದಾರೆ. ತನ್ನ ಜೊತೆಗಿದ್ದ ಶಾಸಕರು ಬಿಜೆಪಿಯಲ್ಲಿ ಸಚಿವರಾಗಿರುವುದು ಅವರಿಂದ ನೋಡಲಾಗುತ್ತಿಲ್ಲ. ಅವರ ಹೊಟ್ಟೆ ಉರಿಯ ಬಗ್ಗೆ ನನಗೆ ಮರುಕವಿದೆ ಎಂದರು. ಕೊರೋನಾ ವೈರಸ್ ಬಗ್ಗೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರವಾಸಿಗರ ಬಗ್ಗೆ ಎಚ್ಚರವಹಿಸಿದ್ದೇವೆ. ಬಂದರು ಪ್ರದೇಶದಲ್ಲೂ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ವಾಹನಗಳ ತಪಾಸಣೆಗೆ ಚೆಕ್ ಪೊಸ್ಟ್ ರಚಿಸಲಾಗಿದೆ. 74 ಮಂದಿಗೆ ರಕ್ತಪರೀಕ್ಷೆ ಮಾಡಿದ್ದೇವೆ, ಎಲ್ಲವೂ ನೆಗೆಟಿವ್ ಬಂದಿದೆ. ಜಿಲ್ಲಾಸ್ಪತ್ರೆಗಳಲ್ಲಿ ಹತ್ತು ಬೆಡ್ ಮೀಸಲಿರಿಸಿದ್ದೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಸ್ಕ್ ಸೌಲಭ್ಯ ಇದೆ. ಕೊರತೆ ಇದ್ರೆ ಹೆಡ್ ಆಫ್ ಅಕೌಂಟ್‍ನಲ್ಲಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

Related posts

Leave a Reply

Your email address will not be published. Required fields are marked *