Header Ads
Breaking News

ಕೊಲೆಗೀಡಾದ ರೂಪಶ್ರೀ ಮನೆಗೆ ಸಚಿವ ಇ. ಚಂದ್ರಶೇಖರನ್ ಭೇಟಿ

ಮಂಜೇಶ್ವರ: ಸಹ ಶಿಕ್ಷಕನಿಂದ ಕೊಲೆಗೈಯಲ್ಪಟ್ಟ ಶಿಕ್ಷಕಿ ರೂಪಶ್ರೀ ಯವರ ಮನೆಗೆ ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್ ಭೇಟಿ ನೀಡಿ ಕುಟುಂಬಿಕರನ್ನು ಸಾಂತ್ವನ ಪಡಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಪಿಲ್, ಸಹ ಕಾರ್ಯದರ್ಶಿ ಬಿವಿ.ರಾಜನ್, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಸಿಪಿಐ ನೇತಾರರಾದ ಎಸ್.ರಾಮಚಂದ್ರ, ರಾಮಕೃಷ್ಣ ಕಡಂಬಾರ್, ಬಿ.ಸುಕುಮಾರ್, ಟಿ.ಕೃಷ್ಣನ್, ಲೊರೆನ್ಸ್ ಡಿ ಸೋಜಾ, ಸುನಿತಾ ವಾಲ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಮೀಯಪದವು ವಿದ್ಯಾವರ್ಧಕ ಶಾಲೆಯ ಶಿಕ್ಷಕಿ ಚಿಗುರುಪಾದೆ ನಿವಾಸಿ ರೂಪಶ್ರೀ ಬಿ.ಕೆ.(42) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಕೆ.ವೆಂಕಟರಮಣ ಕಾರಂತ(42) ಹಾಗೂ ನಿರಂಜನ ಕುಮಾರ್(23) ಅವರನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಮಂಗಳವಾರ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

Related posts

Leave a Reply

Your email address will not be published. Required fields are marked *