Header Ads
Breaking News

ಕೊಲೆಗೈದ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾದ ಮೃತದೇಹ : ಮೃತದೇಹವನ್ನು ಪತ್ತೆ ಹಚ್ಚಿದ ಬಂಟ್ವಾಳ ಪೊಲೀಸರು

ಬಂಟ್ವಾಳ: ಬಂಟ್ವಾಳ ತಾಲೂಕಿನ ನಗ್ರಿ ಶಾಂತಿನಗರ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು ಕೇರಳ ಮೂಲದ ನಟೋರಿಯಸ್ ರೌಡಿ, ಕುಖ್ಯಾತ ದರೋಡೆಕೋರ ಮುತ್ತಾಸಿಮ್ ಯಾನೆ ತಸ್ಲಿಮ್ ಎಂಬವನದೆಂದು ಪೊಲೀಸರು ಗುರುತಿಸಿದ್ದಾರೆ.

ಸಜೀಪಮೂಡ ಗ್ರಾಮದ ಬೊಳ್ಳಾಯಿ ಸಮೀಪ ನಗ್ರಿ ಎಂಬಲ್ಲಿ ರಸ್ತೆ ಬದಿಯಲ್ಲಿ ಇರುವ ಗುಡ್ಡ ಪ್ರದೇಶದ ಮೈದಾನದಲ್ಲಿ ಕಾರೊಂದು ಕಂಡುಬಂದಿದ್ದು, ಅದರ ಹಿಂಬದಿಯ ಸೀಟಿನಲ್ಲಿ ಸುಮಾರು 40ರಿಂದ 50 ವರ್ಷ ಹರೆಯದ ಶವ ಕುಳಿತ ಸ್ಥಿತಿಯಲ್ಲಿ ಕಂಡುಬಂದಿತ್ತು. ವ್ಯಕ್ತಿಯನ್ನು ಕೊಂದು ಮೃತದೇಹವನ್ನು ಕಾರಿನಲ್ಲಿ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕಾರಿನ ನೋಂದಣಿ ಸಂಖ್ಯೆಯನ್ನು ಗಮನಿಸಿದಾಗ ಬೆಂಗಳೂರು ಮೂಲದ ವಾಹನ ಇರಬಹುದು ಎಂದು ಶಂಕಿಸಲಾಗಿತ್ತು. ವಿಷಯ ತಿಳಿದ ಕೂಡಲೇ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸೈ ಅವಿನಾಶ್, ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ಸಿಬ್ಬಂದಿ ವಿಜಯ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಟೋರಿಯಸ್ ರೌಡಿಶೀಟರ್ ಆಗಿರುವ ಮುತ್ತಾಸಿಮ್‍ನನ್ನು ಅಪಹರಣ ಮಾಡಿ ಕೊಲೆಗೈದಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಬೆಳಗಾವಿಯಿಂದ ಈತನನ್ನು ತಂಡವೊಂದು ಕಿಡ್ನಾಪ್ ಮಾಡಿ ಕೊಲೈಗೈದು ಕಾರಿನಲ್ಲಿ ಮೃತದೇಹವನ್ನು ಬಿಟ್ಟು ಪರಾರಿಯಾಗಿದೆ. ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಇತ್ತೀಚೆಗಷ್ಟೇ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದು ಎರಡು ದಿನದ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಜೈಲ್‍ನಿಂದ ಹೊರ ಬಂದ ತಕ್ಷಣವೇ ತಂಡ ಈತನನ್ನು ಕಿಡ್ನಾಪ್ ಮಾಡಿ ಕೊಲೈಗೈದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *