Header Ads
Header Ads
Breaking News

ಕೊಲೆಯತ್ನ ಆರೋಪಿ ಬಂಧನ

ಉಳ್ಳಾಲ: ಹಳೇ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿ ಯುವಕನೋರ್ವನ ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಉಳ್ಳಾಲ ದರ್ಗಾ ಸಮೀಪ ಬಂಧಿಸಿದ್ದಾರೆ.

ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಮುಸ್ತಾಫ ಯಾನೆ ಸೋನು (21) ಎಂಬಾತನನ್ನು ಬಂಧಿಸಲಾಗಿದೆ. ಜೂ.29 ರಂದು ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ವೆಂಕಟೇಶ್ ಎಂಬವರ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು. ಹಳೇ ಪ್ರಕರಣವೊಂದನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೃತ್ಯ ನಡೆದಿತ್ತು.
ಆರೋಪಿ ವಿರುದ್ಧ ಕಲಂ 341,323,504,506,307 ಜತಗೆ34 ಐಪಿಸಿಯಂತೆ ಪ್ರಕರಣಗಳು ದಾಖಲಾಗಿದೆ.
ಆರೋಪಿ ಮುಸ್ತಾಫ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ ಪ್ರಕರಣಗಳು, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಒಂದು , ಕೊಣಾಜೆ ಠಾಣೆಯಲ್ಲಿ ಕಳವು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಇವೆ.

Related posts

Leave a Reply