Header Ads
Header Ads
Breaking News

ಕೊಲ್ಲೂರಿನ ಮುದ್ದಿನ ಆನೆ ಇಂದಿರಾ ಇನ್ನಿಲ್ಲ!

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಣ್ಣಾನೆ ಇಂದಿರಾ (62) ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದೆ. ಅತ್ಯಂತ ಸಾಧು ಸ್ವಭಾವದ ಈ ಆನೆ ದೇವಾಲಯಕ್ಕೆ ನಿತ್ಯ ಬರುವ ಸಾವಿರಾರು ಮಂದಿ ಭಕ್ತರ, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು. ಮಂಗಳವಾರ ಬೆಳಿಗ್ಗೆ ಅದರ ಶೆಡ್ ನಲ್ಲಿ ನಿಂತಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ ಪಶು ವೈದ್ಯರನ್ನು ಕರೆಸಲಾಯಿತು. ವೈದ್ಯರು ಪರೀಕ್ಷಿಸಿ ತಲೆಗೆ ಜ್ವರ ಏರಿದೆ ಎಂದು ಹೇಳಿದ್ದು, ಔಷಧೋಪಚಾರ ನಡೆಸಿದ್ದರು. ಆದರೇ ಮಲಗಿದ್ದಲ್ಲಿಂದ ಏಳದ ಇಂದಿರಾ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ.


ಕೊಲ್ಲೂರಿನ ಪ್ರತಿಯೊಬ್ಬರಿಗೂ ಇಂದಿರಾ ಆನೆ ಅತ್ಯಂತ ಪ್ರಿಯವಾಗಿತ್ತು. ಅದು ಸತ್ತಿರುವ ವಿಷಯ ತಿಳಿದು ಕೊಲ್ಲೂರು ಪೇಟೆಯ ಜನರು ಬಂದು ಅಂತಿಮ ದರ್ಶನ ಪಡೆದು ಕಣ್ಣೀರು ಮಿಡಿಯುತ್ತಿದ್ದರು. ಇಂದಿರಾ ಗೌರವಾರ್ಥ ಇಂದು ಕೊಲ್ಲೂರು ಪೇಟೆಯಲ್ಲಿ ಬಂದ್ ಆಚರಣೆ ನಡೆಸಲಾಗಿದೆ. ದೇವಾಲಯದ ವತಿಯಿಂದ ಧಾರ್ಮಿಕ ವಿಧಿಗಳನ್ನು ನಡೆಸಿ ಆನೆಯ ಅಂತ್ಯಸಂಸ್ಕಾರಗಳನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ.

Related posts

Leave a Reply

Your email address will not be published. Required fields are marked *