Header Ads
Header Ads
Breaking News

ಕೊಲ್ಲೂರು ತಾಯಿಯ ಸನ್ನಿದಾನಕ್ಕೆ ರಾಘವೇಂದ್ರ ರಾಜಕುಮಾರ ಭೇಟಿ.

ಕೊಲ್ಲೂರು ಮುಕಾಂಬಿಕೆಯ ಪವಾಡಗಳು ಒಂದೆರಡಲ್ಲ. ತಾಯಿಗೆ ಶರಣು ಬಂದವರ ಇಷ್ಟ ಈಡೇರದೇ ಇರಲ್ಲ. ನಟಸಾರ್ವಭೌಮ ಡಾ.ರಾಜ್ ಕುಮಾರ್ ಕುಟುಂಬಕ್ಕೂ, ಕೊಲ್ಲೂರು ಕ್ಷೇತ್ರಕ್ಕೂ ಇರುವ ಅವಿನಾಭಾವ ಸಂಬಂಧ ಯಾರಿಗೂ ಗೊತ್ತಿರಲಿಲ್ಲ. ಅನಾರೋಗ್ಯದಿಂದ ಗುಣಮುಖರಾದ ರಾಘವೇಂದ್ರ ರಾಜ್ಕುಮಾರ್ ಕೊಲ್ಲೂರು ಮೂಕಾಂಬಿಕೆ ಶಕ್ತಿಯನ್ನು ನೆನಪಿಸಿದ್ದಾರೆ,ಕೊಲ್ಲೂರು ಮೂಕಾಂಬಿಕೆ, ಕಾಪು ಮಾರಿಯಮ್ಮ ದೇವರ ದರುಶ ಪಡೆದು ಶಕ್ತಿದೇವತೆ ನಮಿಸಿ ಧನ್ಯತೆ ಮೆರೆದಿದ್ದಾರೆ.ರಾಘವೇಂದ್ರ ರಾಜ್ ಕುಮಾರ್, ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡದ್ದೇ ಹೆಚ್ಚು. ಅವರೇ ಹೇಳುವಂತೆ ಈಗೇನಿದ್ರೂ ಅವರದ್ದು ಮರುಜನ್ಮ. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ಸಿನಿಮಾರಂಗದಲ್ಲೂ ರಾಜಣ್ಣ ಮರುಜನ್ಮ ಪಡೆದಿದ್ದಾರೆ. ಬಹುನಿರೀಕ್ಷೆಯ ‘ತ್ರಯಂಬಕಂ’ ಚಿತ್ರೀಕರಣದ ವೇಳೆ ಅವರು ಕುಟುಂಬ ಸಮೇತ ಉಡುಪಿಗೆ ಬಂದಿದ್ರು. ಶೂಟಿಂಗ್ ಮುಗಿಯೋದನ್ನೇ ಕಾಯ್ತಿದ್ದ ರಾಘಣ್ಣ, ಒಂದು ಕ್ಷಣವೂ ವಿಳಂಬ ಮಾಡದೆ, ಕೊಲ್ಲೂರಿನ ಮುಕಾಂಬಿಕಾ ದೇವಿಯ ದರ್ಶನಕ್ಕೆ ಧಾವಿಸಿದ್ರು. ಕೊಲ್ಲೂರು ಮುಕಾಂಬಿಕೆಯ ಬಗ್ಗೆ ಮಾತನಾಡುವಾಗ ರಾಘಣ್ಣ ಬಾವುಕರಾದ್ರು. ವರ್ಷದ ಹಿಂದೆ ತೀವ್ರ ಅನಾರೋಗ್ಯ ಪೀಡಿತರಾದಾಗ, ಕೊಲ್ಲೂರು ಸನ್ನಿಧಿಯಲ್ಲಿ ಚಂಡಿಕಾ ಹೋಮ ನಡೆಸಿದ್ದರಂತೆ ರಾಘಣ್ಣ. ‘ಅಮ್ಮನನ್ನೂ (ಪಾರ್ವತ್ತಮ್ಮ)ಕರೆಸಿಕೊಂಡೆ, ನನಗೂ ಯಾಕೆ ತಾಯಿ ಈ ನೋವು, ನನಗೆ ಬಣ್ಣ ಹಚ್ಚುವ ಭಾಗ್ಯ ಇಲ್ವಾ ಎಂದು ಮರುಗಿದ್ದರಂತೆ. ಪವಾಡ ಏನು ಗೊತ್ತಾ? ವರ್ಷದೊಳಗೆ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬಣ್ಣ ಹಚ್ಚಿದ್ದಾರೆ. ಅದೂ ಎರಡು ಚಿತ್ರಗಳು ಮುಕ್ತಾಯದ ಹಂತದಲ್ಲಿದ್ರೆ, ಮತ್ತೆರಡು ಚಿತ್ರ ಸೆಟ್ಟೇರಲು ಸಜ್ಜಾಗಿದೆ.
_ಅಣ್ಣಾವ್ರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ, ಕೊಲ್ಲೂರು ಮುಕಾಂಬಿಕೆಗೆ ಹರಕೆ ಹೊರಲಾಗಿತ್ತಂತೆ. ಕೆಲವೇ ದಿನಗಳಲ್ಲಿ ನಟಸಾರ್ವಭೌಮ ಕಾಡಿನಿಂದ ಬಿಡುಗಡೆಯಾಗಿದ್ರು. ತಕ್ಷಣವೇ ಕುಟುಂಬ ಸಮೇತ ಕೊಲ್ಲೂರಿಗೆ ಬಂದ ಅಣ್ಣೋವ್ರು, ಚಂಡಿಕಾಹೋಮ ಮಾಡಿಸಿ, ತಾಯಿಯ ಸನ್ನಿಧಿಯಲ್ಲಿ ಏಸುದಾಸ್ ಜೊತೆಗೂಡಿ ಭಕ್ತಿಗೀತೆಗಳನ್ನು ಹಾಡಿದ್ರಂತೆ. ಹೀಗೆ ರಾಘಣ್ಣನ ನೆನಪಲ್ಲಿ ಕೊಲ್ಲೂರು ಮುಕಾಂಬಿಕೆಯ ಗುಣಗಾನ ಹರಿಯುತ್ತಲೇ ಇತ್ತು. ಇನ್ನು ಮುಂದೆ ವರ್ಷಕ್ಕೊಂದು ಬಾರಿ ಸನ್ನಿಧಿಯಲ್ಲಿ ಚಂಡಿಕಾ ಹೋಮ ನಡೆಸಲು ರಾಜ್ ಕುಟುಂಬ ನಿರ್ಧರಿಸಿದೆಯಂತೆ.ಕರಾವಳಿಯ ಕಾಪು ಮಾರಿಯಮ್ಮ ,ಕಟೀಲು ಹೀಗೆ ಪ್ರಸಿದ್ಧ ಕ್ಷೇತ್ರದ ದರುಶನ ಪಡೆದ್ರು.

ಸದ್ಯ ರಾಘಣ್ಣ ನಟಿಸಿರುವ ‘ಅಮ್ಮನ ಮನೆ’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಯುವ ನಟರೊಂದಿಗೆ ಸೇರಿ ನಟಿಸುತ್ತಿರುವ ‘ತ್ರಯಂಬಕಂ’ ಕರಾವಳಿಯಲ್ಲಿ ಚಿತ್ರೀಕರಣ ಪೂರೈಸಿದೆ. ಹಾಗೆ ನೋಡಲು ಹೋದ್ರೆ, ಅನಾರೋಗ್ಯದಿಂದ ಚೇತರಿಸಿಕೊಂಡ ನಂತ್ರ, ರಾಘವೇಂದ್ರ ರಾಜ್ ಕುಮಾರ್ ಹಿಂದಿಗಿಂತಲೂ ಚಿತ್ರರಂಗದಲ್ಲಿ ಆಕ್ಟಿವ್ ಆಗಿದಾರೆ. ಇವರ ಜೊತೆ ನಟಸೋದೇ ಸಂಭ್ರಮ ಅಂತಾರೆ, ಚಿತ್ರದ ಹಿರೋಯಿನ್ ಅನುಪಮಾ ಗೌಡ.

ಮುಂದೆ ಚಿತ್ರರಂಗದಲ್ಲಿ ಸಿಗುವ ಎಲ್ಲಾ ಪ್ರಸಿದ್ದಿಯನ್ನು ತಾಯಿ ಮುಕಾಂಬಿಕೆಗೆ ಅರ್ಪಿಸೋದಾಗಿ ರಾಘಣ್ಣ ಹೇಳ್ತಾರೆ. ಕ್ಷೇತ್ರದಲ್ಲಿ ನಡೆಯುವ ಚಂಡಿಕಾಹೋಮದ ಪ್ರಸಿದ್ದಿ ಈ ನಿದರ್ಶನದಿಂದ ಮತ್ತೆ ಮತ್ತೆ ಸಾಭೀತಾದಂತಾಗಿದೆ.

Related posts

Leave a Reply