Header Ads
Header Ads
Header Ads
Breaking News

ಕೊಲ್ಲೂರು ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.ಕೊಲ್ಲೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಬ್ಯಾಚ್‌ಮೇಟ್ ರೇಷ್ಮಾ ನಡುವಿನ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವೆಂದು ತಿಳಿದು ಬಂದಿದ್ದು, ಇದೀಗ ರೇಷ್ಮಾ ಕೊಲ್ಲೂರು ಠಾಣೆ ಸಮೀಪದ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಅವಳನ್ನ ರಕ್ಷಿಸಿದ ಪೊಲೀಸರು ಕೊಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ನಾಗರಾಜ್ ಮತ್ತು ರೇಷ್ಮಾ ಒಂದೇ ಬ್ಯಾಚ್‌ನ ಪೇದೆಗಳಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಿನ್ನೆ ಇವರಿಬ್ಬರ ನಡುವೆ ರಜೆ ವಿಚಾರದಲ್ಲಿ ಮನಸ್ತಾಪವಾಗಿದ್ದು, ನೀನು ಹೋಗುವುದಾರೆ ನನ್ನ ಡೆಡ್‌ಬಾಡಿ ನೋಡಿಕೊಂಡು ಹೋಗು ಎಂದು ಬೆದರಿಸಿದ್ದ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ನಾಗರಾಜ್ ಬೆದರಿಕೆ ಹಾಕಿದ್ದ ಹಿನ್ನೆಲೆ ರೇಷ್ಮಾ ಈ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಬೆಳಿಗ್ಗೆ ನಾಗಾರಾಜ್ ಆತ್ಮಹತ್ಯೆಯಿಂದ ಖಿನ್ನತೆಗೊಳಗಾದ ರೇಷ್ಮಾ ಕೊಲ್ಲೂರು ಠಾಣೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊಲ್ಲೂರು ಠಾಣೆಯ ಸಿಬ್ಬಂದಿಗಳು ಆಕೆಯನ್ನ ರಕ್ಷಿಸಿ, ಕೊಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply