Header Ads
Header Ads
Breaking News

ಕೊಲ್ಲೂರು ಮೂಕಾಂಬಿಕಾ ದೇವಳದ ವತಿಯಿಂದ ದತ್ತು ಸ್ವೀಕಾರ ವಿದ್ಯಾಸಂಸ್ಥೆಗಳ ದತ್ತು ತೆಗೆದುಕೊಂಡ ಆದೇಶ ಹಿಂಪಡೆಯಿರಿ ಮುಜರಾಯಿ ಇಲಾಖೆಯ ಬಿ.ಎಸ್. ನಾಗರತ್ನಮ್ಮ ಆದೇಶ

ಬಂಟ್ವಾಳ: ಕೊಲ್ಲುರು ಶ್ರೀ ಮೂಕಾಂಬಿಕ ದೇವಾಲಯದ ವತಿಯಿಂದ ಬಂಟ್ವಾಳ ತಾಲೂಕಿನ ಎರಡು ಖಾಸಗಿ ವಿದ್ಯಾಸಂಸ್ಥೆಗಳನ್ನು ದತ್ತು ತೆಗದುಕೊಂಡ ಆದೇಶವನ್ನು ಹಿಂಪಡೆಯುವಂತೆ ಸರಕಾರದ ಅಧೀನ ಕಾರ್ಯದರ್ಶಿ( ಮುಜರಾಯಿ ಇಲಾಖೆ) ಬಿ.ಎಸ್.ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲುರು ಶ್ರೀ ಮೂಕಾಂಬಿಕ ದೇವಾಲಯದ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀ ದೇವಿ ವಿದ್ಯಾಕೇಂದ್ರ ಪ್ರೌಢಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಕೆಲವು ಷರತುಗಳನ್ನು ವಿಧಿಸಿ ಅನುಮತಿ ನೀಡಿ ಆದೇಶಿಸಲಾಗಿತ್ತು. ಈ ಎರಡು ವಿದ್ಯಾಸಂಸ್ಥೆಗಳ ಖರ್ಚುಗಳನ್ನು ದೇವಾಲಯದ ವತಿಯಿಂದ ಪಾವತಿಸಲಾಗುತ್ತಿತ್ತು. ೨೦೦೬-೦೭ರಿಂದ ೨೦೧೬-೧೭ರವರೆಗೆ ಎರಡು ವಿದ್ಯಾ ಸಂಸ್ಥೆಗಳಿಗೆ ಒಟ್ಟು ೨,೮೩,೨೫,೪೨೪ ರೂಗಳನ್ನು ಖರ್ಚು ಮಾಡಿರುವುದಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವರದಿ ನೀಡಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ ಮತ್ತು ೨೦೦೨ರ ನಿಯಮದಂತೆ ದೇವಾಲಯದ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಅವಕಾಶವಿರುವುದಿಲ್ಲ. ಇದರಿಂದ ದೇವಾಲಯಕ್ಕೆ ಅಧಿಕ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಈ ಎರಡೂ ಶಾಲೆಗಳನ್ನು ದತ್ತು ಆದೇಶವನ್ನು ರದ್ದು ಪಡಸಿವಂತೆ ಸರಕಾರದ ಅಧೀನ ಕಾರ್ಯದರ್ಶಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ಸರಕಾರದ ಈ ತೀರ್ಮಾನಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರತಿಕ್ರಿಯಿಸಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ೨ ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕೊಲ್ಲೂರು ದೇವಸ್ಥಾನದ ಈ ಯೋಜನೆಯ ಫಲಾನುಭವಿಗಳಿದ್ದಾರೆ. ಆದರೆ ಏಕಾ‌ಏಕಿ ದತ್ತು ಆದೇಶವನ್ನು ಹಿಂಪಡೆದಿರುವುದು ಸರಿಯಲ್ಲ ಎಂದಿದ್ದಾರೆ.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply