Header Ads
Header Ads
Breaking News

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮಾಜಿ ಆಡಳಿತಾಧಿಕಾರಿಯಿಂದ ಸಂಪ್ರದಾಯ ಉಲ್ಲಂಘನೆ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ವೀಡಿಯೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಒಳಗಿನ ವೀಡಿಯೋ ಇದು.ಮೂಕಾಂಬಿಕಾ ಸನ್ನಿದಿಯ ಗರ್ಭಗುಡಿಯ ಹೊರಗಿರುವ ಲಕ್ಷ್ಮೀ ಮಂಟಪಕ್ಕೆ ಮಹಿಳೆಯೊಬ್ಬರು ಪ್ರವೇಶಿಸುವ ದೃಶ್ಯ. ಈ ಹಿಂದೆ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದಉಮಾ ಅವರು ಈ ನವರಾತ್ರಿಯ ಸಂದರ್ಭ ಲಕ್ಷ್ಮೀ ಮಂಟಪ ಪ್ರವೇಶ ಮಾಡಿದ್ದಾರೆ. ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಸುತ್ತಮುತ್ತ ಇದ್ದ ಕೆಲ ಅರ್ಚಕರು ಒಳ ಪ್ರವೇಶಿಸಲು ಅವಕಾಶ ಮಾಡಿದ್ದಾರೆ. ಆದ್ರೆ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಅರ್ಚಕರು ಉಮಾ ಅವರನ್ನು ಒಳಗೆ ಬಿಟ್ಟದ್ದು ಸರಿಯಲ್ಲ ಅಂತ ಭಕ್ತರು ದೂರುತ್ತಿದ್ದಾರೆ.
ನವರಾತ್ರಿಯ ಸಂದರ್ಭ ಕೊಲ್ಲೂರಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿ ಮೊದಲ ದಿನ ಒಬ್ಬರಿಗೆ, ಎರಡೇ ದಿನ ಇಬ್ಬರಿಗೆ ೯ ದಿನ ೯ ಮಂದಿ ಗ್ರಾಮದ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಅವಕಾಶ ಇಲ್ಲಿ ನಡೆದುಕೊಂಡು ಬಂದಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು. ಆದ್ರೆ ವಿವಾದಿತ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಒಳ ಹೊಕ್ಕಿದ್ದು ಅಪಚಾರ ಆಗಿದೆ ಎಂಬೂದು ಸದ್ಯದ ಆರೋಪ.

ಉಮಾ ಆಡಳಿತಾಧಿಕಾರಿಯಾಗಿದ್ದಾಗ ಅವರ ಅವಧಿಯಲ್ಲಿ ದೇವಸ್ಥಾನದಲ್ಲಿ ಬಹಳ ಅಕ್ರಮ ನಡೆದಿತ್ತು. ಹರಕೆ ನೀಡಿದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂಧಿಗಳು ಗೋಲ್ ಮಾಲ್ ಮಾಡಿದ್ದರು. ಇದೀಗ ಉಮಾ ಅವರಿಗೆ ಲಕ್ಷ್ಮೀ ಮಂಟಪ ಪ್ರವೇಶ ಅವಕಾಶ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯಾಗಿದ್ದಾಗ ಉಮಾ ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು. ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು. ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿ ಬರ್ತಾಯಿದೆ.

Related posts

Leave a Reply