Header Ads
Header Ads
Breaking News

ಕೊಲ್ಲೂರು ಮೂಕಾಂಬಿಕ ದೇವಳದ ದತ್ತು ರದ್ದತಿಗೆ ವಿರೋಧ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಂದ ಪ್ರತಿಭಟನೆ ಸಾವಿರಾರು ವಿದ್ಯಾರ್ಥಿಗಳಿಂದ ಬಿ.ಸಿ ರೋಡ್‌ನಲ್ಲಿ ಪ್ರತಿಭಟನೆ ಊಟದ ತಟ್ಟೆ ಹಿಡಿದು ವಿನೂತನ ಪ್ರತಿಭಟನೆ

 

ಬಂಟ್ವಾಳ: ಕೊಲ್ಲೂರು ಮುಕಾಂಬಿಕದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಅನುದಾನವನ್ನು ರದ್ದುಪಡಿಸಿ ಬಡ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರದ ಕ್ರಮದ ವಿರುದ್ದ ಪೋಷಕರು ಗರಂ ಆಗಿದ್ದು, ಸಾವಿರಾರು ಮಕ್ಕಳು ಪೋಷಕರು ಬಿ.ಸಿ.ರೋಡಿನಲ್ಲಿ ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಶುಕ್ರವಾರ ಬೆಳಿಗ್ಗೆ ಬಿಸಿರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮಕ್ಕಳು ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಸುಮಾರು ೨,೧೨೮ ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಿಸಿಯೂಟ, ಸಮವಸ್ತ್ರ, ಉಚಿತ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ೨೦೦೭ರಿಂದ ಕೊಲ್ಲೂರು ದೇವಾಲಯದಿಂದ ದತ್ತು ಯೋಜನೆಯಡಿ ಕಾನೂನುಬದ್ದವಾಗಿ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ನಾಲ್ಕವರೆ ವರ್ಷದವರೆಗೂ ಮುಂದುವರಿದಿತ್ತು. ಆದರೆ ಇದೀಗ ಹಠಾತ್ತನೆ ಕಲ್ಲಡ್ಕ ಮತ್ತು ಪುಣಚ ಶಾಲೆಯ ಅನುದಾನ ರದ್ದು ಗೊಳಿಸಿರುವುದು ಖಂಡನೀಯವಾಗಿದೆ.
ಈ ವಿದ್ಯಾ ಸಂಸ್ಥೆಗಳಲ್ಲಿ ಶೇ೯೪ ರಷ್ಟು ವಿದ್ಯಾರ್ಥಿಗಳು ಬಡ, ಹಿಂದುಳಿದ, ಪ.ಜಾ.ಪಂ.ಕ್ಕೆ ಸೇರಿದ ಅಹಿಂದ ವಿದ್ಯಾರ್ಥಿಗಳೇ ವಿದ್ಯಾರ್ಜನೆ ಮಾಡುತ್ತಿದ್ದಾರೆ. ರಾಜ್ಯದ ೫೨ ಶಾಲೆಗಳಿಗೆ ಈ ರೀತಿಯಾಗಿ ಅನುದಾನ ನೀಡಲಾಗುತ್ತದ್ದು ಇದೀಗ ರಾಜಕೀಯ ದ್ವೇಷಕ್ಕಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಈ ಎರಡು ಶಾಲೆಗೆ ಬರುತ್ತಿದ್ದ ಅನುದಾನವನ್ನು ಮಾತ್ರ ರದ್ದುಗೊಳಿಸಿರುವುದು ಕನ್ನಡ ಶಾಲೆಯ ಮೇಲಿನ ದೌರ್ಜನ್ಯವಾಗಿದೆಯಲ್ಲದೆ ಸರಕಾರದ ಈ ಅಮಾನವೀಯ ಕ್ರಮ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗಿದೆ. ಸರಕಾರ, ಸಚಿವರ ದ್ವೇಷದ ಮತ್ತು ನೀಚ ರಾಜಕಾರಣದಿಂದ ದೇವರ ಪ್ರಸಾದ ರೂಪದ ಅನ್ನಕ್ಕೆ ಕಲ್ಲು ಹಾಕಿ ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು ಇಲ್ಲದಿದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಊಟದ ತಟ್ಟೆ ಗಳ ಜೊತೆಗೆ ಬಿ.ಸಿ.ರೋಡಿಗೆ ಬಂದ ಮಕ್ಕಳು ಪ್ರತಿಭಟನೆಯುದ್ದಕ್ಕೂ ತಟ್ಟೆ ಬಡಿಯುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply