Header Ads
Breaking News

ಕೊಳಲಗಿರಿ ಉಡುಪಿ ಹೊಸ ಸೇತುವೆ ಕಟ್ಟುವಿಕೆ, ಮಳೆ ನೆರೆಗೆ ಕೊಚ್ಚಿಹೋದ ಸಲಕರಣೆಗಳು

ಕೊಳಲಗಿರಿ ಪರಾರಿ ಮೂಲಕ ಶೀಂಬ್ರ, ಮಣಿಪಾಲಕ್ಕೆ ಸಂಪರ್ಕ ಕಲ್ಪಿಸಲು ಸ್ವರ್ಣಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯ ಸಲಕರಣೆಗಳು ಭಾರೀ ಮಳೆಗೆ ಕೊಚ್ಚಿ ಹೋಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ರಾತ್ರಿ ಒಂದೇ ಸಮನೆ ನೀರಿನ ಹರಿವು ಹೆಚ್ಚಳವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೇತುವೆ ಕಾಮಗಾರಿಯನ್ನು ಮಳೆಗಾಲದ ಪ್ರಯುಕ್ತ ಇನ್ನೆರಡು ದಿನಗಳಲ್ಲಿ ಸ್ಥಗಿತಗೊಳಿ ಸುವ ಬಗ್ಗೆ ನಿರ್ಧರಿಸಿದ್ದು, ಸಲಕರಣೆಗಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗಿಲ್ಲ. ಶೇಖರಿಸಿಟ್ಟಿದ್ದ ಕಬ್ಬಿಣದ ಸಲಕರಣೆ ಮತ್ತು ಇನ್ನಿತರ ಸರಕುಗಳು ಕೊಚ್ಚಿ ಹೋಗಿವೆ. ಸೇತುವೆ ನಿರ್ಮಾಣಕ್ಕೆ ಹಾಕಿದ ಮಣ್ಣು ಕೂಡ ಕೊಚ್ಚಿ ಹೋಗಿದೆ. ಒಂದೇ ಬಾರಿ ಭಾರೀ ಪ್ರಮಾಣದ ನೀರು ಬಂದಿದ್ದರಿಂದ ಸಾಮಾನು ಸೇತುವೆ ಕಾಮಗಾರಿಗೆ ಹೊಳೆಯ ತೀರ ಏರಿದೆ ನೀರು. ಕಳೆದ ಡಿಸೆಂಬರ್ನಲ್ಲಿ ಕಾಮಗಾ