Header Ads
Breaking News

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ : ಮಣಿಪಾಲ ಠಾಣೆಯಲ್ಲಿ ಪ್ರಕರಣ

ಪರ್ಕಳ ಮಾಣಿಬೆಟ್ಟು ಇಲ್ಲಿ ಗಿಡ ಗಂಟಿಗಳು ಬೆಳೆದಿರುವ ನಿರ್ಜನ ಪ್ರದೇಶದಲ್ಲಿ, ಸುಮಾರು 30 ವರ್ಷ ಪ್ರಾಯದ ಅಪರಿಚಿತ ಯುವಕನ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಶವವು ಕೊಳೆತಿದ್ದು ಯುವಕ ಮೃತಪಟ್ಟು ಎಳು ದಿನಗಳು ಕಳೆದಿರ ಬಹುದೆಂದು ಅಂದಾಜಿಸಲಾಗಿದೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ಘಟನೆಯ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಶವಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದ್ದಾರೆ. ಮೃತನ ವಾರಸುದಾರರು ಮಣಿಪಾಲ ಠಾಣೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸ ಬಹುದು.

Related posts

Leave a Reply

Your email address will not be published. Required fields are marked *