Header Ads
Header Ads
Breaking News

ಕೊಳೆತ ಸ್ಥಿತಿಯಲ್ಲಿ ಸಿಕ್ಕ ಚಿರತೆಯ ಶವ

ಬಜಪೆ ಸಮೀಪದ ಎಕ್ಕಾರು ಅಗರಗುತ್ತು ನಿರ್ಜನ ಗುಡ್ದ ಪ್ರದೇಶದಲ್ಲಿ ಚಿರತೆಯೊಂದರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ, ಕೊಳೆತ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಗುಡ್ಡ ಪ್ರದೇಶದಲ್ಲಿ ಹುಡುಕಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯ ಪರೀಕ್ಷೆ ನಡೆಸಿದ್ದಾರೆ ೯-೧೦ ವರ್ಷ ಪ್ರಾಯದ ಚಿರತೆಯಾಗಿದ್ದು,3-4 ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ, ಮೃತ ದೇಹದ ಮೇಲೆ ಬೇಟೆಗಾರರ ಯಾವುದೇ ಗುಂಡೇಟು ಮತ್ತು ಉರುಳಿಗೆ ಸಿಕ್ಕಿಹಾಕಿಕೊಂಡ ಗಾಯಗಳು ಇಲ್ಲವಾಗಿದ್ದು ಸಾವಿಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ದೇಹದ ಕೆಲವು ಅಂಗಗಳನ್ನು ತೆಗೆಯಲಾಗಿದ್ದು ನಂತರ ಸ್ಥಳದಲ್ಲಿಯೇ ಶವವನ್ನು ದಹನ ಮಾಡಲಾಗಿದೆ. ವಲಯ ಅರಣ್ಯಾಧಿಕಾರಿ ಶ್ರೀಧರ ಪಿ, ವನಪಾಲಕ ಜಗರಾಜ್, ಪಶುವೈದ್ಯಾಧಿಕಾರಿ ಮಹೇಶ್ ಎಕ್ಕಾರು ಪಂಚಾಯತ್ ಅಧ್ಯಕ್ಷ ಸುರೇಶ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 

ಎಕ್ಕಾರು ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಚಿರತೆ ಹಾವಳಿ ಇದ್ದು, ಇದನ್ನು ಹಿಡಿಯಲು ಕೆಲವು ಕಡೆಗಳಲ್ಲಿ ಅರಣ್ಯಾಧಿಕಾರಿಗಳು, ಗೂಡನ್ನು ಅಳವಡಿದ್ದರು, ಆದರೆ ಚಿರತೆ ಸಿಕ್ಕಿರಲಿಲ್ಲ, ಎಕ್ಕಾರು ಸುತ್ತ ಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಯಿಗಳು ನಾಪತ್ತೆಯಾಗುತ್ತಿದ್ದು, ಚಿರತೆಯೇ ನಾಯಿಗಳನ್ನು ಹೊತ್ತುಯ್ಯುತ್ತಿದ್ದವು ಎಂದು ಸ್ಥಳೀಯರು ಹೇಳುತ್ತಿದ್ದು, ಸಂಜೆಯಾದ ಕೂಡಲೇ ಜನರು ಹೊರಬರಲು ಹೆದರುತ್ತಿದ್ದರು.

Related posts

Leave a Reply