Header Ads
Header Ads
Header Ads
Breaking News

ಕೊಳ್ನಾಡು ಗ್ರಾಮದ ಸಮೀಪದ ರಸ್ತೆ ಕಾಮಗಾರಿಗೆ ಚಾಲನೆ 2 ಕೋಟಿ ರೂ.ವೆಚ್ಚದಲ್ಲಿ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿ

 

ವಿಟ್ಲದ ಕೊಳ್ನಾಡು ಗ್ರಾಮದ ಸಮೀಪದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರಕಿತ್ತು. ವಿಟ್ಲದ ಕೊಳ್ನಾಡು ಗ್ರಾಮದ ಮಜಿ‌ಓಣಿ-ಮಾದಕಟ್ಟೆ-ಪಂಜಿಗದ್ದೆ -ಮದಕ-ಕರೈ ರಸ್ತೆಗೆ ಒಂದು ಬಾರಿ ಅಭಿವೃದ್ಧಿ ಯೋಜನೆಯಲ್ಲಿ ಮಂಜೂರಾದ 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭ ಅಕ್ಟೋಬರ್ 22 ರಂದು ಬಿ.ಸಿ.ರೋಡ್‌ನಲ್ಲಿ ನಡೆಯಲಿರುವ ಬಂಟ್ವಾಳ ಹಬ್ಬದಂಗವಾಗಿ ನೌಫಲ್ ಕುಡ್ತಮುಗೇರು ಅವರು ಆಯೋಜಿಸಿದ ಪ್ರಚಾರ ವಾಹನವನ್ನು ಸಚಿವ ರೈ ಅವರು ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಸಚಿವರು ಜಿ.ಪಂ.ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅನುದಾನದ ಮೂಲಕ ಅಭಿವೃದ್ಧಿಪಡಿಸುವ ಸಾಧನೆ ಆರಂಭವಾಗಿರುವುದು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಎನ್ನುವುದು ಹೆಮ್ಮೆ. ಈ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿರುವುದು ಪ್ರಥಮ ಎಂದು ಹೇಳಿದರು.

ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಹಾಜಿ, ಮತ್ತಿತರು ಉಪಸ್ಥತಿದ್ರು.

Related posts

Leave a Reply