Header Ads
Breaking News

ಕೊಳ್ನಾಡ್‍ನಲ್ಲಿ ಸಿಎಎ, ಎನ್‍ಆರ್‍ಸಿ ವಿರೋಧಿಸಿ ಪ್ರತಿಭಟನೆ

ವಿಟ್ಲ: ಕೊಳ್ನಾಡು ಸಾಲೆತ್ತೂರು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್‍ಯನ್ನು ವಿರೋಧಿಸಿ ಪ್ರತಿಭಟನೆ ಸಾಲೆತ್ತೂರಿನಲ್ಲಿ ನಡೆಯಿತು. ಜ್ಞಾನಪ್ರಕಾಶ್ ಸ್ವಾಮೀಜಿ ಮೈಸೂರು ಮಾತನಾಡಿ ದೇಶ ದೇಶವಾಗಿ ಉಳಿದಿದ್ದರೆ ಅದು ಸಂವಿಧಾನದ ಮೂಲಕ. ನಾವು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿಲ್ಲ. ಸಂವಿಧಾನವನ್ನು ಉಳಿಸಲು ಬಂದಿದ್ದೇವೆ.ಸಂವಿಧಾನ ನಮ್ಮನ್ನು ನೈಜ್ಯ ಭಾರತೀಯರನ್ನಾಗಿಸುತ್ತದೆ. ಆ ಸಂವಿಧಾನಕ್ಕೆ ಅಪಾಯ ಬಂದಾಗ ನಾವು ಬೀದಿಗೆ ಬರಲೇಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸಾದ್ ಮಾತನಾಡಿ ಅನ್ನ, ನೀರು ಕೇಳಿ ಈ ದೇಶಕ್ಕೆ ಬಂದ ಮಧ್ಯ ಏಷಾದ್ಯದವರು ಆರೆಸ್ಸೆಸ್, ಬಜರಂಗದಳ, ಬಿಜೆಪಿ ಮೂಲಕ ಹಿಂದುಳಿದ ಜಾತಿಗಳ ಯುವಕರಿಗೆ ಹಾಗೂ ದುರ್ಗವಾಹಿನಿ ಮೂಲಕ ಹಿಂದುಳಿದ ಜಾತಿಗಳ ಯುವತಿಯರ ಕೈಗೆ ಕತ್ತಿ ಕೊಟ್ಟು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದಾಳಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಹೇಳಿದರು.

ಚಿಂತಕ ಮಹೇಂದ್ರ ಕುಮಾರ್ ಕೊಪ್ಪ ಮಾತನಾಡಿ ಬೀದರ್‍ನಲ್ಲಿ ನಾಟಕ ಮಾಡಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಪ್ರಭಾಕರ್ ಭಟ್ ದೇಶ ದ್ರೋಹ ಭಾಷಣ ಮಾಡಿದರೆ ಯಾವುದೇ ಪ್ರಕರಣವಿಲ್ಲ. ಪುಲ್ವಾಮ ದಾಳಿಯ ಬಗ್ಗೆ ಇದುವರೆಗೂ ತನಿಖೆಗೊಂಡಿಲ್ಲ. ಈ ಬಗ್ಗೆ ಯಾರೂ ಕೂಡ ತನಿಖೆ ಒತ್ತಾಯ ಮಾಡುತ್ತಿಲ್ಲ. ದೇಶ ಪ್ರೇಮ ಎಂಬ ಕಪಟ ಸುಳ್ಳುಗಳನ್ನು ಹೇಳುತ್ತ ಜನರ ವ್ಯವಹಾರಗಳಿಗೆ ಬೆಂಕಿ ಇಟ್ಟು ಅಮಾಯಕರ ಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಸಮಸ್ತ ಕೇರಳ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಸಾಲೆತ್ತೂರು ನಿತ್ಯಾಧರ್ ಚರ್ಚ್‍ನ ವಂದನೀಯ ಫಾದರ್ ಹೆನ್ರಿ ಡಿಸೋಜ, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ,ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *