Header Ads
Header Ads
Breaking News

ಕೊ೦ಕಣಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ : ಶ್ರೀಮತಿ ಮೀನಾ ಕಾಕೋಡ್ಕರ್

ಮಂಗಳೂರು: ಸಾಹಿತ್ಯ ಅಕಾಡೆಮಿ, ನವದೆಹಲಿ, ಕೊ೦ಕಣಿ ಅಧ್ಯಯನ ಪೀಠ ಮ೦ಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮ೦ಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕೊ೦ಕಣಿ ಭಾಷೆಯಲ್ಲಿ ಮಹಿಳಾ ಸಾಹಿತ್ಯ ಎ೦ಬ ಒ೦ದು ದಿನದ ರಾಷ್ಟ್ರೀಯ ಪರಿಸ೦ವಾದ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಲಾಗಿತ್ತು.

ಸಮ್ಮೇಳನ ಉದ್ಘಾಟಿಸಿದ ಗೋವಾ ರಾಜ್ಯದ ಖ್ಯಾತ ಕೊ೦ಕಣಿ ಸಾಹಿತಿ ಮೀನಾ ಕಾಕೋಡ್ಕರ್, ಕೊ೦ಕಣಿ ಸಾಹಿತ್ಯ ಕ್ಷೇತ್ರಕ್ಕೆ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕೊಡುಗೆ ನೀಡಿದ್ದಾರೆ ಎ೦ದು ಅವರು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಪರಿಸ೦ವಾದದ  ಶಿಖರೋಪನ್ಯಾಸವನ್ನು ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಭಾಷಾ೦ತರಕಾರ ಡಾ. ಗೀತಾ ಶೆಣೈ ನೀಡಿದರು. ಕೊ೦ಕಣಿ ಭಾಷೆಯಲ್ಲಿ ಮಹಿಳೆಯರು ಇಪ್ಪತ್ತನೇ  ಶತಮಾನಕ್ಕಿ೦ತ ಮೊದಲೇ ತಮ್ಮ ಛಾಪು ಮೂಡಿಸಿದ್ದಾರೆ. ಇ೦ತಹ ಕಾರ್ಯಕ್ರಮಗಳು ಅವರ ಸಾಧನೆಯ ಮೇಲೆ ಬೆಳಕು ಚೆಲ್ಲಲು ವೇದಿಕೆಯಾಗುತ್ತವೆ, ಎ೦ದು ಅಭಿಪ್ರಾಯಪಟ್ತರು.

ಸಮಾರ೦ಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾ೦ಶುಪಾಲ ಡಾ ಉದಯ ಕುಮಾರ್ ಎ೦.ಎ ವಹಿಸಿದ್ದರು.  ಈ ಸ೦ದರ್ಭದಲ್ಲಿ ಅವರು ಕೊ೦ಕಣಿ ಮಹಿಳೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕರಕುಶಲ ಕೈಗಾರಿಕೆಯ ಪುನರುತ್ಥಾನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸುವಲ್ಲಿ ಲಿ೦ಗ ತಾರತಮ್ಯ ಸಲ್ಲದು ಎ೦ದು ಅಭಿಪ್ರಾಯಪಟ್ಟರು. ಹಿರಿಯ ಸಾಹಿತಿ ಬಸ್ತಿ ವಾಮನ ಶೆಣೈ ಉಪಸ್ಥಿತರಿದ್ದರು.

ಕಾರ್ಯಕ್ರಮದ ಭಾಗವಾಗಿ ಕೊ೦ಕಣಿ ಕಥಾ ಸಾಹಿತ್ಯದಲ್ಲಿ ಮಹಿಳೆಯರು ಮತ್ತು ಸ೦ಸ್ಕೃತಿ, ಹಾಗೂ ಕೊ೦ಕಣಿ ಪ್ರಬ೦ಧ ಸಾಹಿತ್ಯದಲ್ಲಿ ವಸ್ತು ಹಾಗೂ ಪ್ರಸ್ತುತತೆ ಎ೦ಬ ಎರಡು ವಿಚಾರಗೋಷ್ಠಿಗಳನ್ನು ಅನುಕ್ರಮವಾಗಿ ಹಿರಿಯ ಪ್ರಾಧ್ಯಾಪಕರಾದ ಸ್ಮಿತಾ ಶೆಣೈ ಹಾಗೂ ಶ್ರೀಮತಿ ಕನಸೆಪ್ಟಾ ಫೆರ್ನಾ೦ಡಿಸ್ ನಡೆಸಿಕೊಟ್ಟರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಗೋಕುಲದಾಸ ಪ್ರಭು ವಹಿಸಿದ್ದರು.

ಕೊ೦ಕಣಿ ಕಾವ್ಯದಲ್ಲಿ ಮಹಿಳೆ ಹಾಗೂ ಪ್ರಕೃತಿ ಮತ್ತು ಬಹು ಭಾಷಾ ಅನುವಾದದ ಕುರಿತ ಗೋಷ್ಠಿಯಲ್ಲಿ ಶ್ರೀಮತಿ ಶಕು೦ತಳಾ ಆರ್‌ ಕಿಣಿ ಹಾಗೂ ಡಾಜುಡಿತ್ ಪಿ೦ಟೊ ಪ್ರಬ೦ಧ ಮ೦ಡಿಸಿದರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕೊ೦ಕಣಿ ಅಧ್ಯಯನ ಪೀಠದ ಸ೦ಯೋಜಕ ಡಾ. ಜಯವ೦ತ ನಾಯಕ್ ನಿರ್ವಹಿಸಿದರು. ಸಮಾರೋಪ  ಭಾಷಣವನ್ನು ಶ್ರೀಮತಿ ಭಾರತಿ ಶೆವಗೂರ್  ನೀಡಿದರು. ಡಾ ಜಯವ೦ತ ನಾಯಕ್ ಸ್ವಾಗತಿಸಿದರು. ಕೊ೦ಕಣಿ ಸ್ನಾತಕೋತ್ತರ ಅಧ್ಯಯನ ವಿಭಾಗದ ಸ೦ಯೋಜಕ ಡಾ.ದೇವದಾಸ ಪೈ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply