Header Ads
Breaking News

ಕೋಚ್ ಮಹೇಶ್ ಕುಮಾರ್ ಸಾಧನೆ: ವಿಶೇಷ ಒಲಿಂಪಿಕ್ಸ್‌ನಲ್ಲಿ ಸ್ಕೇಟಿಂಗ್‌ನಲ್ಲಿ ಭಾರತಕ್ಕೆ 49 ಪದಕಗಳು

ಮಾರ್ಚ್ 14 ರಿಂದ 21ರ ವರೆಗೆ ಅಬುದಾಭಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ವಿಶ್ವ ಸ್ಪರ್ಧಾಕೂಟದಲ್ಲಿ 13 ಚಿನ್ನ 20 ಬೆಳ್ಳಿ ಹಾಗೂ 16 ಕಂಚಿನ ಸಹಿತ ಒಟ್ಟು 49 ಪದಕಗಳನ್ನು ಭಾರತದ ಸ್ಕೇಟಿಂಗ್ ಪಟುಗಳು ಪಡೆದುಕೊಂಡಿದ್ದಾರೆ ಎಂದು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‍ನ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದರು. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮತನಾಡಿದ ಅವರು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ 24 ಸ್ಕೇಟಿಂಗ್ ಪಟಗಳು 19 ಪದಕಗಳನ್ನು ಗಳಿಸಿರುವುದು ನಮಗೆ ಹೆಮ್ಮೆಯ ವಿಚಾರ. ಪದಕವನ್ನು ಗಳಿಸಿದ ಭಿನ್ನ ಸಾಮಥ್ರ್ಯದ ಮಕ್ಕಳನ್ನು ತರಬೇತುಗೊಳಿಸಿದವರು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‍ನ ಕೋಚ್ ಮಹೇಶ್ ಕುಮಾರ್‍ರವರು ಎನ್ನುವುದು ಖುಷಿಯ ವಿಚಾರ ಎಂದು ಹೇಳಿದರು. ಈ ಸಂದರ್ಭ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‍ನ ಕೋಚ್ ಮಹೇಶ್ ಕುಮಾರ್ ಮತ್ತು ಕಾರ್ಯಕಾರಿ ಸದಸ್ಯ ಪ್ರಮೋದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *