Header Ads
Header Ads
Header Ads
Breaking News

ಕೋಟದ ಹಂದೆ ಶ್ರೀ ಮಹಾವಿಷ್ಣು, ವಿನಾಯಕ ದೇವಳದಲ್ಲಿ ಕಳ್ಳತನ ಮಹಾವಿಷ್ಣು ಮತ್ತು ವಿನಾಯಕ ದೇವರ ಬೆಳ್ಳಿ ಪ್ರಭಾವಳಿ ಕಳವು ಸುಮಾರು ೩ ಲಕ್ಷ ಮೌಲ್ಯದ ಆಭರಣ ಕಳವು

ಕೋಟದ ಹಂದೆ ಶ್ರೀ ಮಹಾವಿಷ್ಣು ಮತ್ತು ವಿನಾಯಕ ದೇವಳದಲ್ಲಿ ಕಳ್ಳರು ತಡರಾತ್ರಿ ಕಳವು ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಅಂದಾಜು 3 ಲಕ್ಷ ಮೌಲ್ಯದ ಆಭರಣ ಮತ್ತು ಮಹಾವಿಷ್ಣು ಮತ್ತು ವಿನಾಯಕ ದೇವರ ಪ್ರಭಾವಳಿಯನ್ನ ಕಳವು ಮಾಡಿದ್ದಾರೆ. ದೇವಳದ ಹಿಂಭಾಗದ ಹಂಚು ಕಿತ್ತು ಒಳಪ್ರವೇಶಿಸಿದ ಕಳ್ಳರು ಕಳ್ಳತನ ನಡೆಸಿ ಹಿಂಭಾಗದ ಬಾಗಿಲ ಬೀಗ ಮುರಿದು ಹೊರಬಂದಿದ್ದಾರೆ. ನಂತರ ಅಲ್ಲಿಂದ ಸಮೀಪದಲ್ಲೇ ಇರುವ ಹಾಡಿಗೆ ತೆರಳಿ ಅಲ್ಲಿ ದೇವರ ಪ್ರಭಾವಳಿಯ ಬೆಳ್ಳಿಯನ್ನು ಕಿತ್ತು ಪರಾರಿಯಾಗಿದ್ದಾರೆ.

ಎಡಿಶನಲ್ ಎಸ್.ಪಿ ಕುಮಾರ ಚಂದ್ರ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಬೇಕಾಗಿದೆ.

Related posts

Leave a Reply