Header Ads
Header Ads
Header Ads
Breaking News

ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥನ ವೈಭವದ ಬೆಳ್ಳಿ ರಥೋತ್ಸವ : ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮಕ್ಕೆ ತೆರೆಬಿದ್ದಿದೆ..ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥನ ವೈಭವದ ಬೆಳ್ಳಿ ರಥೋತ್ಸವ ನಡೆದಿದ್ದು ಲಕ್ಷಾಂತರ ಜನ ಪುಣ್ಯ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದಾರೆ..ಮಂಜುನಾಥನ ಸಂಭ್ರಮದ ಲಕ್ಷದಿಪೋತ್ಸವದ ವೈಭವದ ಝಲಕ್ ಇಲ್ಲಿದೆ ನೋಡಿ..

ಕೋಟ್ಯಾಂತರ ಭಕ್ತರ ಪಾಲಿಗೆ ಸಾಕ್ಷಾತ್ ಶಿವ ಸಾನಿಧ್ಯ, ಭೂಲೋಕದ ಕೈಲಾಸ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಬ್ಬದ ಸಂಭ್ರಮಕ್ಕೆ ತೆರೆಬಿದ್ದಿದೆ…ಕೋಟಿ ಕೋಟಿ ವಿದ್ಯುತ್ ದೀಪಾಲಂಕಾರಗಳಿಂದ ಕುಡುಮ ಕ್ಷೇತ್ರ ಕಂಗೊಳಿಸಿದ್ದು, ಮಂಜುನಾಥನ ಅಪರೂಪದ ದರ್ಶನಕ್ಕೆ ಲಕ್ಷಾಂತರ ಭಕ್ತ ಗಣ ಸಾಕ್ಷಿಯಾಗಿದೆ..5 ದಿನಗಳ ಲಕ್ಷದೀಪೋತ್ಸವ ಸಂಭ್ರಮ ಮಂಜುನಾಥೇಶ್ವರನ ಬೆಳ್ಳಿ ರಥೋತ್ಸವದ ಮೂಲಕ ತೆರೆಕಂಡಿದ್ದು ಮಂಜುನಾಥ ಭಕ್ತರ ಬಳಿಗೆಯೇ ಬಂದು ದರ್ಶನ ನೀಡಿದ್ದಾನೆ.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸದ ಹಿನ್ನಲೆಯಲ್ಲಿ ಕ್ಷೇತ್ರವನ್ನು ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು..ಎಲ್ಲಿ ನೋಡಿದ್ರೂ ಝಗಮಗಿಸುವ ಬೆಳಕಿನ ಚಿತ್ತಾರ ಭಕ್ತರ ಕಣ್ಣುಗಳಿಗೆ ಸ್ವರ್ಗದ ಅನುಭವವನ್ನು ನೀಡಿತು..ಲಕ್ಷದೀಪೋತ್ಸವ ದ ಕೊನೆಯದಿನದ ಅಂಗವಾಗಿ ಮಂಜುನಾಥನ ಸಾನಿಧ್ಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು..ಗರ್ಭಗುಡಿಯಲ್ಲಿ ಮಂಜುನಾಥ ದೇವರ ಬಲಿಪೂಜೆ ಬಳಿಕ ಬೆಳ್ಳಿಯ ರಥದಲ್ಲಿ ಮಂಜುನಾಥನ ಉತ್ಸವ ಮೂರ್ತಿಯನ್ನು ವಿರಾಜಮಾನಗೊಳಿಸಲಾಯಿತು..ತಡ ರಾತ್ರಿಯ ದೇವರ ಅಪರೂಪದ ಕೈಂಕರ್ಯವಾದ್ರೂ ಲಕ್ಷಾಂತರ ಜನ ಯಾವುದೇ ಗೊಂದಲವಿಲ್ಲದೆ ಮಂಜುನಾಥನ ದರ್ಶನ ಪಡೆದ್ರು. ಇದಕ್ಕೂ ಮುನ್ನ ಅಮೃತವರ್ಷಿಣಿ ಸಭಾಭವನದಲ್ಲಿ 86 ನೇ ಸಾಹಿತ್ಯ ಸಮ್ಮೇಳನ ನಡೆದಿದ್ದು,ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.ಈ ವೇಳೆ ಧರ್ಮಸ್ಥಳ ದ ಕೈಂಕರ್ಯವನ್ನು ಹಾಡಿ ಹೊಗಳಿದ ಡಿಸಿಎಂ,ಧರ್ಮಸ್ಥಳ ದೇಶಕ್ಕೆ ಮಾದರಿ ಎಂದು ಬಣ್ಣಿಸಿದರು..ಇದಕ್ಕೂ ಮುನ್ನ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ,ಕ್ಷೇತ್ರದಲ್ಲಿ ನಡೆಯುವ ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ ಸಾರವನ್ನು ಜನರಿಗೆ ತಿಳಿಸಿದರು.

ಇನ್ನು ಭಕ್ತರ ಪಾಲಿಗೆ ಮೋಕ್ಷ ಸ್ಥಳ ಅನ್ನಿಸಿಕೊಂಡಿರುವ ಧರ್ಮಸ್ಥಳದಲ್ಲಿ ನಡೆದ ಈ ವಿಶೇಶ ಸಂಧರ್ಭವನ್ನು ಕಾಣಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ರು..ಕಿಕ್ಕಿರಿದ ಜನಸಂದಣಿ ಇದ್ರೂ ಎಲ್ಲೂ ಲೋಪವಾಗದೆ, ಕೋಟಿ ಕೋಟಿ ದೀಪಗಳಿಂದ ಕಂಗೊಳಿಸಿದ ಮಂಜುನಾಥನ ಕ್ಷೇತ್ರವನ್ನು ಕಂಡು ಭಕ್ತರು ಆನಂದಪಟ್ಟರು…ಮಕ್ಕಳು ಮಹಿಳೆಯರು ಹಿರಿಯರು ವೃದ್ದರೆನ್ನದೆ ಲಕ್ಷಾಂತರ ಜನ ಲಕ್ಷದಿಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದು,ದೇವರ ದರ್ಶನ ಪಡೆದು ಪುಣ್ಯ ಗಳಿಸಿದ್ರು. ಒಟ್ಚಿನ್ನಲ್ಲಿ ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಧ್ಧೂರಿಯಿಂದ ನಡೆದಿದ್ದು ಎಂದಿನಂತೆ ಈ ಭಾರಿಯೂ ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿ ಮೇಳೈಸಿದೆ..ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಸ್ವರ್ಗವೇ ಧರೆಗಿಳಿದಿದ್ದು ಅಖಿಲಾಂಡಕೋಟಿಯ ಒಡೆಯನ ದರ್ಶನ ಪಡೆದು ಕೋಟ್ಯಾಂತರ ಜನ ಕೃತಾರ್ಥರಾದರು.

 

Related posts

Leave a Reply

Your email address will not be published. Required fields are marked *