Header Ads
Breaking News

ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ : ಜಗದೀಶ್ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಮನವಿ

ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಬಿಲ್ಲವ ಜಾತಿ ನಿಂದನೆ ಮಾಡಿರುವ ಜಗದೀಶ್ ಅಧಿಕಾರಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ವತಿಯಿಂದ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಜಗದೀಶ್ ಅಧಿಕಾರಿ ತುಳುನಾಡಿನ ಅವಳಿ ಪುರುಷರಾದ ಕೋಟಿ ಚೆನ್ನಯರು ಹಾಗೂ ಬಿಲ್ಲವ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ. ಬಿಲ್ಲವ ಹಿರಿಯ ನಾಯಕರನ್ನು ನಿಂದಿಸಿದ್ದಾರೆ, ನಮ್ಮ ಜಾತಿಯನ್ನು ಹಾಗೂ ನಾವು ಆರಾಧಿಸಿಕೊಂಡು ಬಂದಿರುವ ಕಾರಣಿಕ ಶಕ್ತಿಗಳನ್ನು ಅವಮಾನಿಸಿರುವುದು ತೀವ್ರ ನೋವುಂಟು ಮಾಡಿದ್ದು ಜಗದೀಶ್ ಅಧಿಕಾರಿಯ ಹೇಳಿಕೆಯನ್ನು ಖಂಡಿಸುವುದಲ್ಲದೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಬಿರುವೆರ್ ಸೇವಾ ಟ್ರಸ್ಟ್‍ನ ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಮಾತನಾಡಿ ಜಗದೀಶ್ ಅಧಿಕಾರಿ ವೀರಪುರುಷರಾದ ಕೋಟಿ ಚೆನ್ನಯರು ಹಾಗೂ ಬಿಲ್ಲವ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ, ಕೋಟಿ ಚೆನ್ನಯರು ಧರ್ಮಕ್ಕಾಗಿ ಅನ್ಯಾದ ವಿರುದ್ದ ಹೋರಾಡಿದವರು, ಬಿಲ್ಲವರು ಕೂಡ ಅನ್ಯಾಯದ ವಿರುದ್ದ ಹೋರಾಡಿದವರು, ಮುಂದೆಯೂ ಹೋರಾಡುವವರು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತಿ ಸದಸ್ಯ ತುಂಗಪ್ಪ ಬಂಗೇರ, ಟ್ರಸ್ಟ್‍ನ ಅಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ, ಕಾರ್ಯದರ್ಶಿ ಸಂಜೀವ ನಾಟಿ, ಕೋಶಾಧಿಕಾರಿ ಸದಾಶಿವ ನಾಟಿ, ಸಂಘಟನಾ ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *