Header Ads
Header Ads
Breaking News

ಕೋಟೆಕಾರು ಕಾಯರುಮಜಲು ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಸ್ಥಳೀಯರಿಂದ ವಿರೋಧ

 ಮನೆಗಳು ಮಾತ್ರವಲ್ಲ, ದೇವ ಸಂಕಲ್ಪಗಳು, ನಾಗಚೈತನ್ಯ ವಾಸಸ್ಥಾನ, ದೈವಗಳ ತಾಣ, ದೇವತಾ ಸಂಕಲ್ಪ ಕುಣಿದಾಡುವ ತಾಣವಾದ ಕಾಯರ್‌ಮಜಲಿನ ಸುಮಾರು 9.98 ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಮುಂದಾದವರ ಮಾನಸಿಕ ಭಾವನೆಗಳ ಬಗ್ಗೆ ಸಂಶಯವಿದೆ ಎಂದು ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಖೇದ ವ್ಯಕ್ತಪಡಿಸಿದ್ದಾರೆ.ಕೋಟೆಕಾರು ಕಾಯರ್ ಮಜಲು ಎಂಬಲ್ಲಿ ಯೋಜಿತ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯ ದುಷ್ಪರಿಣಾಮದ ಕುರಿತು ಕೋಟೆಕಾರು ಗ್ರಾಮಸ್ಥರ ಸಮ್ಮುಖದಲ್ಲಿ , ಕಾಯರ್‌ಮಜಲು ದೇವರ ಅರಮನೆ ವಠಾರದಲ್ಲಿ ಭಾನುವಾರ ಜರಗಿದ ಬಹಿರಂಗ ಜಾಗೃತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಪಾವಿತ್ರ್ಯತೆಯನ್ನು ಹೊಂದಿರುವ ಕ್ಷೇತ್ರದಲ್ಲಿ ಘಟಕ ಸ್ಥಾಪನೆಗೆ ಎಂದಿಗೂ ಬಿಡಲಾರೆವು. ಪಟ್ಟಣ ಪಂಚಾಯಿತಿಯಲ್ಲಿ ಈ ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ಜಿಲ್ಲಾಡಳಿತವೇ ಹೊಣೆಯಾಗಿದ್ದು, ಅಲ್ಲೇ ಮನವಿ ಮಾಡಿ ಯೋಜನೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಬೇಕಿದೆ. ಈ ಹಿಂದೆ ಜಿ.ಪಂ ಸದಸ್ಯನಾಗಿದ್ದ ಸಂದರ್ಭ ಬಂಟ್ವಾಳದ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮುಂದಾದಾಗಲೂ ವಿರೋಧಿಸಿದ ಫಲವಾಗಿ. ಇದೀಗ ತಾತ್ಕಾಲಿಕವಾದ ಘಟಕ ಇದ್ದು, ಶೀಘ್ರವೇ ಅದು ಸ್ಥಳಾಂತರವಾಗಲಿದೆ. ಕಾಯರ್ ಮಜಲಿನಲ್ಲಿ ಸ್ಥಾಪನೆಗೆ ಎಂದಿಗೂ ಬಿಡುವುದಿಲ್ಲ ಎಂದರು.

 

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ನಿಯೋಜಿತ ಪ್ರದೇಶವನ್ನು ನಿವೇಶನಕ್ಕೆಂದು ಮೀಸಲಿಟ್ಟಿರುವ ದಾಖಲೆಯಿದೆ.2018ರಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಆದೇಶದಂತೆ ಘಟಕ ನಿರ್ಮಿಸಲು ಅನುಮತಿಯೇ ಇಲ್ಲ. ಇತರೆ ಸರಕಾರಿ ಸಂಸ್ಥೆಗಳಿಂದಲೂ ಅನುಮತಿಯನ್ನು ಪಡೆಯಲಾಗಿಲ್ಲ. ಕುಮ್ಕಿ ಜಾಗವನ್ನು ಘಟಕ ಸ್ಥಾಪನೆಗೆಂದೇ ಕುಮ್ಕಿ ರಹಿತ ಎಂದು ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ೨೦೨೦ರವರೆಗಿನ ಮಾಸ್ಟರ್ ಪ್ಲಾನ್ ಮಾಡುತ್ತದೆ. ಅದರಲ್ಲಿಯೂ ಉಲ್ಲೇಖವಿಲ್ಲ.10 ಮೀ ದೂರದಲ್ಲಿ ಊರಿನ ಜನರಿಗೆ ಕುಡಿಯುವ ನೀರು ಕೊಡುವ ಬೋರ್ ವೆಲ್ ಇದೆ. ಆದರೆ ಘಟಕ ಸ್ಥಾಪನೆಯಾದಲ್ಲಿ ಜನರಿಗೆ ವಿಷ ನೀರು ಕುಡಿಸಿದಂತೆ ಆಗಬಹುದು ಎಂದು ಗ್ರಾಮಸ್ಥರೂ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಶ್ರಾಂತ ಜಿಲ್ಲಾಧಿಕಾರಿ ಗಣಪತಿ, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್, ದೇವರಮನೆ ದೇವಸ್ಥಾನದ ಟ್ರಸ್ಟೀ ರವೀಂದ್ರ ಕೋಟೆಕಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Related posts

Leave a Reply