Header Ads
Header Ads
Breaking News

ಕೋಟೆಕಾರು ಪಟ್ಟಣ ಪಂಚಾಯತ್‌ನ ನವೀಕೃತ ಕಟ್ಟಡದ ಉದ್ಘಾಟನೆ

ಉಳ್ಳಾಲ: ಕೇಂದ್ರ ಸರಕಾರದ ಯೋಜನೆಗಳ ಪರಿಚಯಕ್ಕಾಗಿ ಪ್ರತಿ ಪಂಚಾಯಿತಿನಲ್ಲಿ ಸೇವಾ ಕೇಂದ್ರ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದವರು ಸೇವಾಕೇಂದ್ರಗಳನ್ನು ಅನುಷ್ಠಾನ ಮಾಡಲಿದ್ದಾರೆ. ಅದಕ್ಕಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ಒಪ್ಪಂದ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಪೌರಾಡಳಿತ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ನಿರ್ಮಿಸಲಾದ ಕೋಟೆಕಾರು ಪಟ್ಟಣ ಪಂಚಾಯತ್ ನವೀಕೃತ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಜನ ಗ್ರಾಮದಲ್ಲಿ ತಮ್ಮ ಹಕ್ಕುಗಳಿಗೆ ಅಲೆದಾಡಬಾರದು ಅನ್ನುವ ಉದ್ದೇಶದಿಂದ ಪ್ರಧಾನಿ ಮೋದಿಯವರ ಕಲ್ಪನೆಯಂತೆ ಸೇವಾ ಕೇಂದ್ರಗಳನ್ನು ಪ್ರತಿ ಪಂಚಾಯಿತಿನಲ್ಲಿ ತೆರೆಯುವಂತಹ ಯೋಜನೆ ಕೇಂದ್ರ ಸರಕಾರದಿಂದ ರೂಪಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಜೊತೆಗೆ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಜಿಲ್ಲೆಯ ಪ್ರತಿ ಮತಗಟ್ಟೆಯಲ್ಲಿ ಕೇಂದ್ರ ಸರಕಾರದ ಸೇವಾಕೇಂದ್ರ ಕಾರ್‍ಯಾಚರಿಸಲಿದೆ ಎಂದರು.ಉಪಾಧ್ಯಕ್ಷ ಅನಿಲ್ ಕುಮಾರ್ ಬಗಂಬಿಲ ಸ್ವಾಗತಿಸಿದರು. ರವಿ ಕೊಂಡಾಣ ಕಾರ್ಯಕ್ರಮ ನಿರೂಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕುಸಾಲ್‌ನಗರ ವಂದಿಸಿದರು.ಇದೇ ವೇಳೆ ಗ್ರಾಮದ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳ ಚೆಕ್ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸುಳ್ಳೆಂಜೀರ್ ವಹಿಸಿದ್ದರು. ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ , ಕಿರಿಯ ಅಭಿಯಂತರೆ ಆರತಿ ಅಣವೇಕರ್, ಭಾಗವಹಿಸಿದ್ದರು.

Related posts

Leave a Reply