Breaking News

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ,  ನಿರ್ದೇಶಕಿ ಪತಿ ಸೇರಿದಂತೆ ಇಬ್ಬರು ಸಿಸಿಬಿ ಪೊಲೀಸರ ವಶಕ್ಕೆ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೆ. ಸಿ. ರೋಡಿನಲ್ಲಿರುವ ತಲಪಾಡಿ ಶಾಖೆಯ ದರೋಡೆ ಯತ್ನ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಗೆ ಸೇರಿದ ನಿರ್ದೇಶಕಿಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿಸಿದವರನ್ನ ಪಿಲಾರು ನಿವಾಸಿ ಬೋಟ್ ರಾಮ ಯಾನೆ ರಾಮಚಂದ್ರ ಪೂಜಾರಿ ಹಾಗೂ ಮೋಹನ್ ಶೆಟ್ಟಿಗಾರ್ ಎನ್ನಲಾಗಿದೆ. ಜೂನ್ ೨೩ರಂದು ಈ ಘಟನೆ ನಡೆದಿದ್ದು ಪಲ್ಸಾರ್ ಬೈಕಿನಲ್ಲಿ ಬಂದಿದ್ದ ಆಗಂತುಕರಿಬ್ಬರು ಬ್ಯಾಂಕಿನ ವಾಚ್‌ಮೆನ್‌ಗೆ ಹಲ್ಲೆ ನಡೆಸಿ ಬೆದರಿಸಿ ಒಳ ಕರೆದೊಯ್ದು ಶಟರನ್ನು ಹಾಕಿದ್ದರು. ಅನಂತರ ಬ್ಯಾಂಕಿನೊಳಗೆ ಇದ್ದ ಲಾಕರಿನಿಂದ ಸುಮಾರು ೩೦ ಕೆಜಿಯಷ್ಟು ಚಿನ್ನವನ್ನು ತಂದಿದ್ದ ಗೋಣಿಚೀಲದೊಳಗೆ ತಪ್ಪಿ ಓಡಲು ಯತ್ನಿಸಿದ ವೇಳೆ ಭ್ಯಾಂಕ್ ಸಿಬ್ಬಂದಿ ರಾಮಚಂದ್ರರ ಶೌರ್ಯದ ಕೆಲಸದಿಂದ ಕಳ್ಳತನದಲ್ಲಿ ಆರೋಪಿಗಳು ವಿಫಲವಾಗಿದ್ದರು. ಇದೀಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

Leave a Reply