Header Ads
Breaking News

ಕೋಟೇಶ್ವರದ ಕೋಡಿ ಬೀಚ್‍ನಲ್ಲಿ ಕರೋನ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ರಚನೆ

ನಾಗರ ಪಂಚಮಿ ಶುಭ ಸಂದರ್ಭದಲ್ಲಿ ಖ್ಯಾತ ಕಲಾವಿದ ಹರೀಶ್ ಸಾಗ ಮರಳಿನ ಮೇಲೆ ಚಿತ್ತಾರ ಬಿಡಿಸಿ ಶುಭ ಕೋರಿದ್ದಾರೆ. ಪ್ರತಿ ಶ್ರಾವಣಮಾಸದಂದು ಬರುವ ಮೊದಲ ಹಬ್ಬ ನಾಗರಪಂಚಮಿ. ಪರಶುರಾಮನ ಸ್ರಷ್ಠಿಯ ಈ ಕರಾವಳಿ ಕ್ಷೇತ್ರದಲ್ಲಿ ನಾಗನನ್ನು ಪ್ರತ್ಯಕ್ಷ ದೇವನನ್ನಾಗಿ, ಪ್ರಕೃತಿಯ ಅವಿಭಾಜ್ಯ ಅಂಗವಾಗಿ ಭಯ, ಭಕ್ತಿ, ಶ್ರದ್ದೆಯಿಂದ ಕುಟುಂಬ ಸಮೇತರಾಗಿ ಆರಾಧಿಸಿಕೊಂಡು ಬರುತ್ತಿರುವ ಹಬ್ಬ. ಈ ಬಾರಿ ಕರೋನ ಕಾರಣದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನವನ್ನ ಸರಿದೂಗಿಸುವಂತೆ ಸಮಸ್ತ ಜನತೆಯ ಪರವಾಗಿ ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ, ರಾಘವೇಂದ್ರ ಅವರುಗಳು ಕೋಟೇಶ್ವರದ ಕೋಡಿ ಬೀಚ್ ನಲ್ಲಿ ಕರೋನ ರಾಕ್ಷಸನಿಂದ ರಕ್ಷಿಸು ಎಂಬ ಸಂದೇಶದೊಂದಿಗೆ ಮರಳುಶಿಲ್ಪ ರಚಿಸಿದ್ದಾರೆ.

Related posts

Leave a Reply

Your email address will not be published. Required fields are marked *