Header Ads
Header Ads
Breaking News

ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆಯಿಂದ ಇಲ್ಲಸಲ್ಲದ ಆರೋಪ : ಪಂಚಾಯತ್ ಸದಸ್ಯರ ಹೇಳಿಕೆ

ಕುಂದಾಪುರ: ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಸದಸ್ಯರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ವಿರುದ್ದ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಕೋಟೇಶ್ವರ ಗ್ರಾಮಪಂಚಾಯತ್ ಉಪಾಧ್ಯಕ್ಷ ಉದಯ್ ನಾಯ್ಕ್ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ನುಡಿದಂತೆ ನಡೆಯಲಿಲ್ಲ. ಒಪ್ಪಂದದ ಪ್ರಕಾರ ಅವರು ಎರಡುವರೆ ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಎಲ್ಲಾ ಸದಸ್ಯರು ಕೇಳಿಕೊಂಡರೂ ಅವರು ಅಧಿಕಾರದಿಂದ ಕೆಳಗಿಳಿಯಲಿಲ್ಲ. ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಕಾರಣಕ್ಕೆ ಅವರು ಇದೀಗ ನಮ್ಮ ಮೇಲೆ ದಾಖಲೆಗಳಿಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ sಸದಸ್ಯರಾದ ರಾಗಿಣಿ ದೇವಾಡಿಗ, ಕೃಷ್ಣ ಗೊಲ್ಲ, ಶಾಂತಾ ಗೋಪಾಲಕೃಷ್ಣ, ನಾಗರಾಜ ಮಡಿವಾಳ ಹಾಜರಿದ್ದರು.

Related posts

Leave a Reply