Header Ads
Header Ads
Breaking News

ಕೋಟ ಅವಳಿ ಕೊಲೆ ಪ್ರಕರಣ- ಮಾರಣಕಟ್ಟೆ ದೇವಸ್ಥಾನದಲ್ಲಿ ಹುಯಿಲು ಸೇವೆ: ಮುಗಿಲು ಮುಟ್ಟಿದ ತಾಯಂದಿರ ಆಕ್ರಂದನ

ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಕೋರಿ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಹಾಗೂ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಕೋಟದ ನಾಗರಿಕರು ಸೇರಿದಂತೆ ಕುಟುಂಬಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹುಯಿಲು ಸೇವೆಯನ್ನು ನೀಡಿದ್ದಾರೆ.

ನಿನ್ನೆ ಕೋಟದ ಅಮೃತೇಶ್ವರಿ ದೇವಳದಲ್ಲಿ ದರ್ಶನ ಸೇವೆ ಇರುವುದರಿಂದ ಶ್ರೀ ದೇವಳದಲ್ಲಿ ಕೋಟ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತ ಸಮೂಹ ಸಾಮೂಹಿಕ ಪ್ರಾರ್ಥನೆಗೆ ಅಣಿಯಾದರು. ದರ್ಶನ ಸೇವೆ ಪ್ರಾರಂಭವಾಗುತ್ತಿದ್ದಂತೆ ದೇವಳದಲ್ಲಿ ಮಕ್ಕಳನ್ನು ಕಳೆದುಕೊಂಡ ಭರತ್ ಹಾಗೂ ಯತೀಶ್ ಮನೆಯವರ ಆಕ್ರಂದನ ಮುಗಿಲು ಮುಟ್ಟಿತು.

ಕೋಟದ ನಾಗರಿಕರು ಸೇರಿದಂತೆ ಭರತ್ ಹಾಗೂ ಯತೀಶ್ ಸ್ನೇಹಿತರು, ಕುಟುಂಬಿಕರು ದೇವರಲ್ಲಿ ಪ್ರಾರ್ಥಿಸಿ ನಿನ್ನ ಸನ್ನಿಧಾನದಲ್ಲಿ ಈ ರೀತಿಯ ಎರಡು ಕೊಲೆಗಳಾಗಿವೆ. ಇಂಥಹ ಕೃತ್ಯಗಳಿಗೆ ನಿನ್ನ ಸಾನಿಧ್ಯದಲ್ಲಿ ಎಡೆ ಉಂಟೆ ಎಂದು ಕೇಳಿದಾಕ್ಷಣ ನನ್ನ ಸನ್ನಿಧಾನದಲ್ಲಿ ಈ ರೀತಿಯ ಕೃತ್ಯ ಎಸಗಿದ ರಾಕ್ಷಸರಿಗೆ ಖಂಡಿತವಾಗಿಯೂ ಬಿಡಲಾರೆ. ತನ್ನ ಮಖದ ಛಾಯೆಗೆ ರಕ್ತದೋಕುಳಿ ಹರಿಸಿದವರ ಮಗ್ಗಲು ಮುರಿಯಲು  ಈ ಹಂತದಲ್ಲೆ ಗಣಗಳನ್ನು ಬಿಟ್ಟಿದ್ದೇನೆ. ಇದಕ್ಕೆಲ್ಲ ನ್ಯಾಯ ದೊರಕಿಸುತ್ತೇನೆ ಎಂದು ನುಡಿಯಿತ್ತಿದೆ. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಲ್ಲೂ ಇದೇ ರೀತಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *