Header Ads
Breaking News

ಕೋಡಿ ಬಸ್‍ಗಳಿಗೆ ಟೋಲ್ ವಿನಾಯಿತಿ ನೀಡದಿದ್ದಲ್ಲಿ ಹೋರಾಟ

ಹೆಜಮಾಡಿ ಕೋಡಿಗೆ ಹೋಗುವ ಬಸ್‍ಗಳಿಗೆ ಹೆಜಮಾಡಿ ಟೋಲ್‍ನಲ್ಲಿ ವಿನಾಯಿತಿ ನೀಡದಿದ್ದಲ್ಲಿ ಹೆಜಮಾಡಿ ಗ್ರಾ.ಪಂ.ಟೋಲ್ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಲಿಖಿತ ಅರ್ಜಿ ನೀಡಿದ್ದಾರೆ.

ಹೆಜಮಾಡಿ ಗ್ರಾ.ಪಂ. ಅಧ್ಯಕ್ಷರು ಸಹಿತ ಎಲ್ಲಾ ಸದಸ್ಯರ ನಿಯೋಗ ಹೆಜಮಾಡಿ ಟೋಲ್ ಪ್ಲಾಜಾ ಕಛೇರಿಗೆ ತೆರಳಿ ಮುಖ್ಯಸ್ಥ ಶಿವಪ್ರಸಾದ್ ಕೈಗೆ ಅರ್ಜಿ ಹಸ್ತಾಂತರಿಸಿದ್ದಾರೆ.
ಮಂಗಳೂರು ಕಡೆಯಿಂದ ಹೆಜಮಾಡಿ ಕೋಡಿಗೆ ಪ್ರಯಾಣಿಸುವ ಬಸ್‍ಗಳು ಕೋಡಿವರಗೆ ಪರ್ಮಿಟ್ ಹೊಂದಿದ್ದರೂ ಕಾನೂನು ಬಾಹಿರವಾಗಿ ಟೋಲ್ ಪ್ಲಾಜಾದ ಬಳಿಯಲ್ಲಿ ಶಾಲಾ ಕಾಲೇಜು ಮಕ್ಕಳನ್ನು ಸಹಿತ ಸಾರ್ವಜನಿಕರನ್ನು ಇಳಿಸ ಹೋಗುತ್ತಿದ್ದರಿಂದ ಬಾರೀ ಸಮಸ್ಯೆಯಾಗಿದೆ. ತಕ್ಷಣವೇ ಇಲಾಖೆ ಕ್ರಮಕೈಗೊಳ್ಳದಿದ್ದಲ್ಲಿ ಹೆಜಮಾಡಿಯ ಟೋಲ್ ಪ್ಲಾಜಾ ಮುಂಭಾಗ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಲಿಕಿತವಾಗಿ ನೀಡಿದ್ದಾರೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗಿದ್ದರು.

Related posts

Leave a Reply

Your email address will not be published. Required fields are marked *