Header Ads
Header Ads
Breaking News

ಕೋತಿ ದಾಳಿಯಿಂದ ಗಂಭೀರ ಗಾಯಗೊಂಡ ಪತ್ರಕರ್ತ ಮಂಗನನ್ನು ಸೆರೆ ಹಿಡಿದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ ಫ್ರೆಂಡ್ಸ್ ವಿಟ್ಲ ತಂಡಕ್ಕೆ ಗ್ರಾಮಸ್ಥರಿಂದ ಶ್ಲಾಘನೆ

ವಿಟ್ಲದ ಪತ್ರಕರ್ತನ ಮೇಲೆ ಸತತ ಎರಡು ಬಾರಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಕೋತಿಯನ್ನು ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ವಿಟ್ಲದ ಪತ್ರಕರ್ತ, ಕೊಳ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ವಿ.ಟಿ ಪ್ರಸಾದ್ ಅವರು ಮನೆಯ ಅಂಗಳದಲ್ಲಿದ್ದ ವೇಳೆ ಒಂಟಿ ಕೋತಿ ದಾಳಿ ನಡೆಸಿತ್ತು. ಚಿಕಿತ್ಸೆ ಪಡೆದು ಮನೆ ಬಂದು ಎರಡು ದಿನದಲ್ಲಿ ಮತ್ತೊಮ್ಮೆ ಇದೇ ಕೋತಿ ದಾಳಿ ನಡೆಸಿತ್ತು. ಇದರಿಂದ ಪ್ರಸಾದ್ ಅವರು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಲವು ಮಂದಿ ಬಂದು ಹಿಡಿಯಲು ಯತ್ನಿಸಿದ್ದರೂ ಕೂಡಾ ವಿಫಲರಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ, ಯೋಗಿಶ್ ಕಾಶಿಮಠ, ಹೈದರ್ ಅಲಿ ಅವರ ತಂಡ ತಮ್ಮ ಸ್ವಂತ ಖರ್ಚಿನಲ್ಲಿ ಹೊಸ ಗೂಡು ಒಂದನ್ನು ತಯಾರಿ ಪ್ರಸಾದ್ ಅವರ ಮಹಡಿ ಮೇಲೆ ಇಟ್ಟಿದ್ದು, ಕೊನೆಗೂ ಆಪರೇಶನ್ ಮಂಕಿ ಸಕ್ಸಸ್ ಆಗಿದೆ. ತಂಡದ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply