Header Ads
Header Ads
Breaking News

“ಕೋಮು ಮುಕ್ತ ಭಾರತ ಅಕ್ರಮ ರಹಿತ ಕೇರಳ”: ಮಚ್ಚಂಪ್ಪಾಡಿಯಲ್ಲಿ ಕಾಲ್ನಡಿಗೆ ಗ್ರಾಮ ಯಾತ್ರೆ

ಮಂಜೇಶ್ವರ: “ಕೋಮು ಮುಕ್ತ ಭಾರತ ಅಕ್ರಮ ರಹಿತ ಕೇರಳ” ಎಂಬ ಘೋಷಣೆಯೊಂದಿಗೆ ರಾಜ್ಯ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷರಾದ ಮುನವ್ವರಲಿ ಶಿಹಾಬ್ ತಂಘಲ್ ರವರು ನಡೆಸುವ ಯುವಜನ ಯಾತ್ರೆಯ ಪ್ರಚರನಾರ್ಥ ಕೆಎಂಸಿಸಿ ಹಾಗೂ ಮುಸ್ಲಿಂ ಯೂತ್ ಲೀಗ್ ಮಚ್ಚಂಪ್ಪಾಡಿ ಶಾಖೆ ಜಂಠಿಯಾಗಿ ಮಚ್ಚಂಪ್ಪಾಡಿಯಲ್ಲಿ ಕಾಲ್ನಡಿಗೆ ಗ್ರಾಮ ಯಾತ್ರೆ ನಡೆಸಿದರು.ಮುಸ್ಲಿಂ ಲೀಗ್ ಹಿರಿಯ ಕಾರ್ಯಕರ್ತ ಪಳ್ಳಿಕುಂಞಿ ಹಾಜಿ ಮುಸ್ಲಿಂ ಯೂತ್ ಲೀಗ್ ಕೋಶಾಧಿಕಾರಿ ರಾಝಿಕ್ ಮಚ್ಚಂಪಾಡಿಯವರಿಗೆ ಧ್ವಜವನ್ನು ಹಸ್ತಾಂತರಿಸಿ ಗ್ರಾಮ ಯಾತ್ರೆಗೆ ಚಾಲನೆ ನೀಡಿದರು. ಮಂಜೆಶ್ವರ ಮಮ್ಡಲ ಮುಸ್ಲಿಂ ಲೀಗ್ ಉಪಾಧ್ಯಕ್ಷ ಪಿ ಎಚ್ ಅಬ್ದುಲ್ ಹಮೀದ್, ಮುಕ್ತಾರ್ ಎ, ಸಿದ್ದೀಖ್ ಮಂಜೇಶ್ವರ, ಇಬ್ರಾಹಿಂ ಕೊಂಬಕುದಿ, ಹುಸೈನ್ ಮಚ್ಚಂಪ್ಪಾಡಿ, ಇಸ್ಮಾಯಿಲ್ ನವಾಬ್, ಅಬೂಬಕ್ಕರ್ ಪಾವೂರು ಸೇರಿದಂತೆ ಹಲವು ನೇತಾರರು ಉಪಸ್ಥರಿದ್ದರು. ಜಾಥಾದಲ್ಲಿ ನೇತಾರರು ಸೇರಿದಂತೆ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.

Related posts

Leave a Reply