Header Ads
Header Ads
Breaking News

ಕೋಮು ಶಕ್ತಿಗಳ ಹಾಗೂ ಗೂಂಡಾ ಮಾಫಿಯಾಗಳ ವಿರುದ್ದ ಸಿಪಿಐ ನಿಂದ ಜಾಗೃತಾ ಚಳವಳಿ

ಮಂಜೇಶ್ವರ: ಕೋಮು ಶಕ್ತಿಗಳ ಹಾಗೂ ಗೂಂಡಾ ಮಾಫಿಯಾಗಳಿಂದಾಗಿ ಸಾಮಾನ್ಯ ಜನತೆಗೆ ನೆಮ್ಮದಿ ಇಲ್ಲದಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಿಪಿಐ ನೇತೃತ್ವದಲ್ಲಿ ಜಾಗೃತಾ ಚಳವಳಿಗೆ ಚಾಲನೆ ನೀಡಲಾಯಿತು.ಕಾಸರಗೋಡು ವಿದ್ಯಾನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿನೋಯ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನ ಸಾಮಾನ್ಯರ ಬದುಕು, ಸೊತ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ನೆಮ್ಮದಿಯ ಜೀವನ ಮರೀಚಿಕೆಯಾಗುತ್ತಿದೆ. ಕೊಲೆ, ಸುಲಿಗೆ ನಡೆಸುವವರು ರಾಜಾ ರೋಷವಾಗಿ ನಡೆಯುತಿದ್ದಾರೆ. ಕೋಮುವಾದಿಗಳ ಅಟ್ಟಹಾಸದಿಂದಾಗಿ ಜನ ಸಾಮಾನ್ಯರ ಬದುಕು ದುಷ್ಕರವೆನಿಸಿದೆ. ಮತ ಧರ್ಮಗಳ ಹೆಸರಲ್ಲಿ ಜನರನ್ನು ವಿಭಜಿಸುವ ಶಕ್ತಿಗಳು ಒಂದೆಡೆಯಾದರೆ ಮರಳು ಸಾಗಾಟ, ಕೋಳಿ ಸಾಗಾಟ, ಬಯಲು ಗದ್ದೆಗಳನ್ನು ಮುಚ್ಚುವುದು ಹಾಗೂ ನಕಲಿ ಮದ್ಯಗಳ ಹರ್ಯುವಿಕೆಯಿಂದಾಗಿ ಜನ ಜೀವನಕ್ಕೆ ನೆಮ್ಮದಿ ಇಲ್ಲದಂತಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭ ಗೌರಿದಾಸ್ ಮುಖ್ಯ ಅತಿಥಿಯಾಗಿದ್ದರು. ಕೆ ವಿ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಬಿ ವಿ ರಾಜನ್, ಕೆ ಎಸ್ ಕುರಿಯೋಸ್ ಮೊದಲಾದವರು ಉಪಸ್ಥರಿದ್ದರು.

Related posts

Leave a Reply