
ಕೋವಿಡ್ 19 ಮಹಾಮಾರಿಯ ದಾಳಿಯ ಬಳಿಕ ಜನರ ಜೀವನ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದಕ್ಕೆ ಪೂರಕವೆಂಬಂತೆ ಸ್ವತಹ ದೇಶದ ಪ್ರಧಾನಿಯೇ ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ್ ಭಾರತ್ ಎನ್ನುವ ಹೊಸ ಸಂದೇಶವನ್ನು ನೀಡುವ ಮೂಲಕ ಇಂಥಹ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಸುವಂತೆ ಪ್ರೋತ್ಸಾಹಿಸಿದ್ದಾರೆ. ಇದೇ ಪ್ರೋತ್ಸಾಹದ ಕರೆಗೆ ಓಗೊಟ್ಟು ಸಾಫ್ಟವೇರ್ ಇಂಜಿನಿಯರ್ ದಂಪತಿಗಳು ಕೊಕ್ಕೋದಿಂದ ಸ್ವದೇಶಿ ಚಾಕಲೇಟ್ ಆವಿಷ್ಕರಿಸುವ ಮೂಲಕ ಪ್ರಚಾರದಲ್ಲಿದ್ದಾರೆ. ತಾವು ತಯಾರಿಸಿದ ಚಾಕಲೇಟುಗಳನ್ನು ದೇಶದ ಮೂಲೆ ಮೂಲೆಗಲ್ಲದೆ, ವಿದೇಶಕ್ಕೂ ಪರಿಚಯಿಸುವ ಮೂಲಕ ವಿಶೇಷ ಸಾಧನೆಯನ್ನೂ ಮಾಡಿ ತೋರಿಸಿದ್ದಾರೆ.