Header Ads
Header Ads
Breaking News

ಕೋಸ್ಟಲ್‌ವುಡ್‌ನ ಟ್ರೆಂಡ್ಸ್ ಮಾಸ ಪ್ರತಿಕೆ ಜುಲೈ 23ರಂದು ಲೋಕಾರ್ಪಣೆ ಸುದ್ದಿಗೋಷ್ಠಿಯಲ್ಲಿ ವಿಜೆ ವಿನೀತ್ ಕುಮಾರ್ ಹೇಳಿಕೆ

 

ವೈಟ್‌ವರ್ಡ್ ಪ್ರೊಡಕ್ಷನ್‌ನ ಪ್ರಥಮ ಉತ್ಪನ್ನ ಕೋಸ್ಟಲ್ ವುಡ್‌ನ ಟ್ರೆಂಡ್ಸ್ ಮಾಸ ಪ್ರತಿಕೆಯ ಬಿಡುಗಡೆ ಸಮಾರಂಭ ನಗರದ ಕುಂಟಿಕಾನ ಬಿ‌ಎಂಎಸ್ ಹೋಟೆಲ್ ಸಭಾಂಗಣದಲ್ಲಿ ಜುಲೈ 23 ರಂದು ನಡೆಯಲಿದೆ ಎಂದು ವಿಜೆ ವಿನೀತ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಸ್ಟಲ್‌ವುಡ್ ಜಗತ್ತಿನಲ್ಲಿ ಹೊಸ ಪ್ರತಿಭೆಗಳು, ಹೊಸ ಆವಿಷ್ಕಾರಗಳು, ವಿಭಿನ್ನ ಪ್ರಯೋಗ ಆಳವಡಿಸಲಾಗತ್ತಿರುವಂತೆಯೇ ತುಳು, ಬ್ಯಾರಿ, ಕೊಂಕಣಿ ಚಿತ್ರಗಳು ಹೊರ ರಾಜ್ಯಗಳಲ್ಲೂ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಭಾರತದಲ್ಲೇ ಮೊದಲ ಬಾರಿಗೆ ಕೋಸ್ಟಲ್ ವುಡ್‌ಗೆಂದೇ ಮುಡಿಪಾಗಿ ಉಳಿಯಲಿರುವ ಕೋಸ್ಟಲ್ ವುಡ್ ಟ್ರೆಂಡ್ಸ್ ಹೆಸರಿನ ಹೊಸ ಮಾಸಿಕದೊಂದಿಗೆ ಚಿತ್ರರಂಗವನ್ನು ಮತ್ತಷ್ಟು ರಂಗೇರಿಸಲಿದ್ದೇವೆ ಅಂತಾ ಹೇಳಿದರು.

ಇನ್ನೂ ಲೋಕಾರ್ಪಣೆ ಸಮಾರಂಭ ಕರಾವಳಿಯ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದೆ ಅಂತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್, ನಾಗರಾಜ್ ರಾವ್, ಸಂದೀಪ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ವರದಿ: ನಾಗೇಶ್ ಕಾವೂರು

Related posts

Leave a Reply