Header Ads
Breaking News

ಕೌಡೂರಿನಲ್ಲಿ ನಾಗರಿಕರೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಸಮಾಲೋಚನೆ

ಕಂದಾವರ ಗ್ರಾಮ ಪಂಚಾಯತ್ ಕೌಡೂರು ಪ್ರದೇಶಕ್ಕೆ ಭೇಟಿ ಕೊಟ್ಟ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಅಲ್ಲಿನ ಸ್ಥಳೀಯರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ನಂತರ ಈ ಬಗ್ಗೆ ಮಾತನಾಡಿದ ಅವರು 2016 ರಲ್ಲಿ ಇಲ್ಲಿನ 187 ಜನರಿಗೆ ಹಕ್ಕುಪತ್ರದ ಜೆರಾಕ್ಸ್ ಪ್ರತಿ ಕೊಟ್ಟಿದ್ದು, ಹಕ್ಕುಪತ್ರದ ಮೂಲಪ್ರತಿಯನ್ನು ಕೊಟ್ಟಿರಲಿಲ್ಲ. ಅದಲ್ಲದೇ ಇಲ್ಲಿಯ ತನಕ ಫಲಾನುಭವಿಗಳಿಗೆ ತಮ್ಮ ಜಾಗವನ್ನು ಕೂಡ ತೋರಿಸಿಲ್ಲ. ಕೇವಲ ರಾಜಕೀಯ ಲಾಭ ಪಡೆಯಲು ಅಧಿಕಾರಿಗಳನ್ನು ಬಳಸಿ ಅಧಿಕಾರ ದುರುಪಯೋಗಪಡಿಸಿ ನಕಲು ಪ್ರತಿ ಕೊಟ್ಟು ಜನರನ್ನು ಮೋಸಗೊಳಿಸುವ ಪ್ರಯತ್ನ 2016 ರಲ್ಲಿ ನಡೆದಿದೆ. ಈಗ ನಮ್ಮ ಸರಕಾರ ಬಂದ ಬಳಿಕ ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ ಕೂಲಕೂಂಶವಾಗಿ ವಿಚಾರಿಸಿದಾಗ ನಕ್ಷೆಯಲ್ಲಿರುವ ನಿವೇಶನಗಳಿಗೂ ಮೂಲಪ್ರತಿಗೂ ತಾಳೆಯಾಗುತ್ತಿಲ್ಲ. ಇದರೊಂದಿಗೆ ಸುತ್ತಮುತ್ತಲಿನ ಜಾಗದ ಮಾಲೀಕರು ಭಾರೀ  ಆರೋಪಗಳನ್ನು ಕೂಡ ಮಾಡಿದ್ದಾರೆ.ಈ ಬಗ್ಗೆ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಅಧಿಕಾರಿಗಳಾದ ಗುರುಪುರ ಉಪತಹಶಿಲ್ದಾರ್ ಶಿವಪ್ರಸಾದ್ , ಯಶವಂತ್ ಬೆಲ್ಚಡ ಪಿ ಡಿ ಓ ಕಂದಾವರ ಯಮನಪ್ಪ ಗ್ರಾಮಕರಣಿಕರು ಕೊಳಂಬೆ,ಮಂಡಲದ ಉಪಾಧ್ಯಕ್ಷರಾದ ಅಮೃತ ಲಾಲ್, ಡಿಸೋಜ, ಮಂಡಲದ ಕಾರ್ಯದರ್ಶಿ ಶೋಧನ್ ಅದ್ಯಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *