Header Ads
Breaking News

ಕೌನ್ ಬನೇಗಾ ಕರೋಡ್ ಪತಿಯಲ್ಲಿ ರವಿ ಕಟಪಾಡಿ

ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್‍ರಿಂದ ನಡೆಸಲ್ಪಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಸಲ್ಲಿ ಪ್ರತಿ ಶುಕ್ರವಾರದ ಕಾರ್ಯಕ್ರಮವನ್ನು ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮೀಸಲಾಗಿರಿಸಿದ್ದು, ಈ ಬಾರಿಯ ಕಾರ್ಯಕ್ರಮಕ್ಕೆ ಕರ್ನಾಟಕ ಕರವಳಿಯ ರವಿ ಕಟಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.ಇತ್ತೀಚೆಗೆ ರವಿ ಕಟಪಾಡಿಯವರಿಗೆ ದೂರವಾಣಿ ಮೂಲಕ ಕರೆಮಾಡಿ ವಿನಂತಿಸಿದ್ದು, ಅಮಿತಾಬ್ ಬಚ್ಚನ್ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಕರ ಎಂದು ನಿರಾಕರಿಸಿದ್ದರು. ಮತ್ತೆ ಮತ್ತೆ ಫೋನಾಯಿಸಿ ರವಿ ಕಟಪಾಡಿಯವರ ಜತೆಗೆ ಚಿತ್ರರಂಗದ ಕಲಾವಿದರೊಬ್ಬರು ಸಹಕರಿಸಲಿದ್ದಾರೆ ಎಂದಿದ್ದು, ರವಿ ಕಟಪಾಡಿಯವರು ಶೋನಲ್ಲಿ ಭಾಗವಹಿಸಲು ಒಪ್ಪಿದ್ದಾರೆ.ರವಿ ಕಟಪಾಡಿಯವರು ಶ್ರೀ ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ಕಳೆದ ಆರು ವರ್ಷಗಳಿಂದ ಆಧುನಿಕ ಮಾದರಿಯ ಅದರಲ್ಲೂ ಹಾಲಿವುಡ್ ಆ್ಯನಿಮೇಶನ್ ಚಿತ್ರಗಳಿಂದ ಆಯ್ದ ಮಾದರಿಯ ಕಲಾತ್ಮಕವಾದ ಫ್ರಾನ್ಸ್, ಲಿಜಾರ್ಡ್ ಮ್ಯಾನ್, ಮಮ್ಮಿ ರಿಟನ್ರ್ಸ್ ಸಿನಿಮಾದ ಮಮ್ಮಿ ವೇಷಧಾರಿಯಾಗಿ 54 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಆರೋಗ್ಯ ನೆರವು ಅಲ್ಲದೆ ಅಂಗವೈಕಲ್ಯ ಹೊಂದಿದ ಬಡ ಮಕ್ಕಳಿಗೆ ನೆರವು ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಇವರ ಸೇವೆಯಿಂದ ಪ್ರೇರಿತರಾಗಿ 2015ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾ ಮಲೈ ಅವರು ರವಿ ಕಟಪಾಡಿಯವರಿಗೆ 10 ಸಾವಿರ ನಗದು ನೀಡಿ ಪ್ರೋತ್ಸಾಹಿಸಿದ್ದರು. ಬರೇ ವೇಷ ಹಾಕಿ ಹಣ ಸಂಗ್ರಹ ಮಾಡದೇ ಪ್ರತೀ ತಿಂಗಳು ಶನಿವಾರದ ಸಂಬಳದಲ್ಲೂ ಸ್ವಲ್ಪ ಹಣವನ್ನು ರವಿ ಕಟಪಾಡಿ ಅವರು, ನಿಸ್ವಾರ್ಥ ಸೇವೆಗಾಗಿ ತೆಗೆದಿರಿಸುತ್ತಾರೆ. ಇದೀಗ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರವಿ ಕಟಪಾಡಿ ಅವರ ಸಾಧನೆ ಬಗ್ಗೆ ಅವರ ಮನೆಯಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದರು. ರವಿ ಕಟಪಾಡಿಯವರು ಮುಂಬೈಯಲ್ಲಿದ್ದು, ಜನವರಿ 15ರ ಶುಕ್ರವಾರ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

Related posts

Leave a Reply

Your email address will not be published. Required fields are marked *