Header Ads
Header Ads
Header Ads
Breaking News

ಕ್ಯಾಂಪ್ಕೊದಿಂದ ಸ್ಪೈಸಿ ಚಾಕೋಲೆಟ್ ಬಿಡುಗಡೆ

ಸಹಕಾರ ಕ್ಷೇತ್ರದ ಮೊಟ್ಟದ ಮೊದಲ ಚಾಕಲೇಟ್ ಕಂಪೆನಿ ಎನಿಸಿದ ಕ್ಯಾಂಪ್ಕೋದಿಂದ ಸ್ಪೈಸಿ ಚಾಕೋಲೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವು ಮಂಗಳೂರಿನಲ್ಲಿ ನಡೆಯಿತು.  ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಕೋಲೆಟ್‌ನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು, ಕ್ಯಾಂಪ್ಕೋ ಚಾಕಲೇಟ್ ಉದ್ಯಮದಲ್ಲಿ ಹಲವು ಕ್ರಾಂತಿಕಾರಕ ಸಾಧನೆಗಳನ್ನು ಮಾಡಿದೆ. ರೈತರಿಂದ ಬಂದ ಕೋಕೊ, ಸಕ್ಕರೆ ಮತ್ತು ಹಾಲು ಉತ್ಪಾದಕರಿಂದ ಬಂದ ಹಾಲಿನ ಪುಡಿಯನ್ನು ಸೇರಿಸಿ ಅದ್ಭುತವಾದ ಚಾಕಲೇಟ್‌ನ್ನು ತಯಾರಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಇಡೀ ದೇಶದ ಜನತೆಗೆ ಮತ್ತು ಮಕ್ಕಳಿಗೆ ಇವರನ್ನು ತಲುಪಿಸಬೇಕೆಂಬ ಮಹತ್ವಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಈ ಸಂದರ್ಭ ಸುರೇಶ್ ಬಂಡಾರಿ, ಶಂಕರ ನಾರಾಯಣ ಕಂಡಿಗೆ, ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *