Header Ads
Breaking News

ಕ್ಯಾಂಪ್ಕೋದಿಂದ ಐತಿಹಾಸಿಕ ದಾಖಲೆಯ 1,878 ಕೋಟಿ ರೂ. ವ್ಯವಹಾರ

ಬೆಳೆಗಾರರ ಹೆಮ್ಮೆಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 2018-19ನೇ ಸಾಲಿನಲ್ಲಿ 1,878 ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಮೂಲಕ ತನ್ನ 46 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ ಮತ್ತು ಅಡಿಕೆಯ ಖರೀದಿಯ ಪ್ರಮಾಣದಲ್ಲಿ ಹೆಚ್ಚಳವನ್ನು ಸಾಧಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ 4 ತಿಂಗಳು ಮಳೆಯಿಂದಾಗಿ ರೈತರಿಗೆ ತೊಂದರೆಯಾಗಿತ್ತು. ಆ ಕಾರಣ ರಿಯಾಯಿತಿ ದರದಲ್ಲಿ ಕೆಲವು ರಾಸಾಯನಿಕವನ್ನು ರೈತರಿಗೆ ಒದಗಿಸಿದ ಪರಿಣಾಮ ಅಡಿಕೆಯನ್ನು ಉಳಿಸುವಲ್ಲಿ ಸಹಾಕಾರಿಯಾಯ್ತು ಎಂದು ಹೇಳಿದ್ರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರ ನಾರಾಯಣ ಭಟ್ ಖಂಡಿಗೆ, ಆಡಳಿತ ನಿರ್ದೇಶಕರಾದ ಸುರೇಶ್ ಭಂಡಾರಿ, ಹಾಗೂ ಮಹಾಪ್ರಬಂದಕರಾದ ರೇಷ್ಮಾ ಮಲ್ಯ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *