Header Ads
Header Ads
Breaking News

ಕ್ಯಾಲೆಂಡರ್ ವರುಷ ಹಣಕಾಸು ವರುಷ, ನವೆಂಬರ್‌ನಲ್ಲಿ ಕೇಂದ್ರ ಬಜೆಟ್ ಮಂಡನೆ

ಹಣಕಾಸು ವರ್ಷವನ್ನು ಏಪ್ರಿಲ್ ಬದಲು ಜನವರಿಯಿಂದಲೇ ಜಾರಿಗೆ ತರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ೨೦೧೮ರಿಂದ ಏಪ್ರಿಲ್ನಿಂದ ಮಾರ್ಚ್ ಬದಲಿಗೆ, ಜನವರಿ ತಿಂಗಳಿನಿಂದ ಡಿಸೆಂಬರ್ವರೆಗೆ ಹಣಕಾಸು ವರ್ಷ ಪಾಲಿಸುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ತಂದರೆ ೧೫೦ ವರ್ಷಗಳಷ್ಟು ಹಳೆಯ ಸಂಪ್ರದಾಯಕ್ಕೆ ಕೊನೆ ಬೀಳಲಿದೆ.
ಕ್ಯಾಲೆಂಡರ್ ವರ್ಷಕ್ಕೆ ಅನುಗುಣವಾಗಿ ಹಣಕಾಸು ವರ್ಷವನ್ನೂ ಬದಲಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಒಲವು ಹೊಂದಿದ್ದಾರೆ.
ಹಣಕಾಸು ವರ್ಷ ಬದಲಿಸುವುದರ ಕಾರ್ಯ ಸಾಧ್ಯತೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿದೆ. ನೀತಿ ಆಯೋಗ ಮತ್ತು ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಕೂಡ ಹಣಕಾಸು ವರ್ಷ ಬದಲಿಸಲು ಒಲವು ವ್ಯಕ್ತಪಡಿಸಿವೆ.
ಕಾರ್ಯರೂಪಕ್ಕೆ ಬಂದರೆ, ಮುಂದಿನ ವರ್ಷದ ಬಜೆಟ್ ಅನ್ನು ನವೆಂಬರ್ ತಿಂಗಳಿನಲ್ಲಿಯೇ?ಮಂಡಿಸಬೇಕಾಗುತ್ತದೆ. ಮಧ್ಯಪ್ರದೇಶ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ೨೦೧೮ರಿಂದ ಹಣಕಾಸು ವರ್ಷ ಬದಲಿಸುವುದಾಗಿ ಪ್ರಕಟಿಸಿದೆ.

Related posts

Leave a Reply